ETV Bharat / state

'ಬೆಟ್ಟ ಗುಡ್ಡಗಳ ಸಂರಕ್ಷಣಾ ಅಭಿಯಾನ': ರಾಮನಗರ ಸಿಇಒಯಿಂದ ವಿನೂತನ ಪ್ರಯೋಗ

author img

By

Published : Feb 28, 2021, 9:53 AM IST

ಕಸ ಮುಕ್ತ ಜಿಲ್ಲೆ ಮಾಡುವ ಭಾಗವಾಗಿ ರಾಮನಗರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು 'ಸ್ವಚ್ಛ ಶುಕ್ರವಾರ' ಎಂಬ ಅಭಿಯಾನದ ಬಳಿಕ ಪ್ರಕೃತಿ ಸೌಂದರ್ಯದ ಭಾಗವಾದ 'ಬೆಟ್ಟ ಗುಡ್ಡಗಳ ಸಂರಕ್ಷಣಾ ಅಭಿಯಾನ'ಕ್ಕೆ ಮುನ್ನುಡಿ ಬರೆದಿದ್ದಾರೆ.

'Hill Conservation Campaign' at Ramnagar
'ಬೆಟ್ಟ ಗುಡ್ಡಗಳ ಸಂರಕ್ಷಣಾ ಅಭಿಯಾನ': ರಾಮನಗರ ಸಿಇಓ ಯಿಂದ ವಿನೂತನ ಪ್ರಯೋಗ

ರಾಮನಗರ: 'ಸ್ವಚ್ಛ ಶುಕ್ರವಾರ' ಅಭಿಯಾನದ ಬಳಿಕ ರಾಮನಗರ ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಇಕ್ರಮ್ ಅವರು ಮತ್ತೊಂದು ವಿನೂತನ ಪ್ರಯೋಗ ಮಾಡಲು ಮುಂದಾಗಿದ್ದಾರೆ.

ಪ್ರತಿ ಶುಕ್ರವಾರ ಬೆಟ್ಟ ಗುಡ್ಡಗಳ ಟ್ರ್ಯಾಕಿಂಗ್ ಮಾಡುವ ಮೂಲಕ ಆ ಪ್ರದೇಶದ ಸುತ್ತಮುತ್ತ ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್ ಪ್ಯಾಕೆಟ್ ಇನ್ನಿತರ ತ್ಯಾಜ್ಯವನ್ನು ಸಂಗ್ರಹಣೆ ಮಾಡಿ ಆ ಪಂಚಾಯಿತಿ ವ್ಯಾಪ್ತಿಯ ಘನ ತ್ಯಾಜ್ಯ ನಿರ್ವಹಣೆ ಘಟಕಕ್ಕೆ ನೀಡುವ ವಿನೂತನ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಮನಗರ ಜಿಲ್ಲೆಯ ಕೂಟಗಲ್ ಬೆಟ್ಟದಲ್ಲಿ ಟ್ರ್ಯಾಕಿಂಗ್​ಗೆ ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯತ್​ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಆ ಪ್ರದೇಶದ ಹಾಕಿರುವ ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ಪ್ಯಾಕೆಟ್ ಇನ್ನಿತರ ತ್ಯಾಜ್ಯವನ್ನು ಸಂಗ್ರಹಿಸಿ ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ನೀಡಿದರು.

ಕಸ ಮುಕ್ತ ಜಿಲ್ಲೆ ಮಾಡುವ ಭಾಗವಾಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು 'ಸ್ವಚ್ಛ ಶುಕ್ರವಾರ' ಎಂಬ ಅಭಿಯಾನದ ಬಳಿಕ ಪ್ರಕೃತಿ ಸೌಂದರ್ಯದ ಭಾಗವಾದ 'ಬೆಟ್ಟ ಗುಡ್ಡಗಳ ಸಂರಕ್ಷಣಾ ಅಭಿಯಾನ'ಕ್ಕೆ ಮುನ್ನುಡಿ ಬರೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.