ETV Bharat / state

ಕೊರೊನಾ ಎಫೆಕ್ಟ್​: 150 ಕುಟುಂಬಗಳನ್ನು ದತ್ತು ಪಡೆದ ಹೀರೋ ಮೋಟೋಕಾರ್ಪ್ - Etv bharat kannada

ಕೋವಿಡ್ ಕಾರಣದಿಂದ ತಂದೆ-ತಾಯಿ, ಪೋಷಕರನ್ನು ಕಳೆದುಕೊಂಡ ಮಕ್ಕಳು ಮತ್ತು ಗಂಡನನ್ನು ಕಳೆದುಕೊಂಡ ಮಹಿಳೆಯರ 150 ಕುಟುಂಬಗಳನ್ನು ಹೀರೋ ಮೋಟೋಕಾರ್ಪ್ ಸಂಸ್ಥೆ ದತ್ತು ಪಡೆದಿದೆ.

ಕುಟುಂಬಗಳನ್ನು ದತ್ತು ಪಡೆದ ಹೀರೋ ಮೋಟೋಕಾರ್ಪ್
ಕುಟುಂಬಗಳನ್ನು ದತ್ತು ಪಡೆದ ಹೀರೋ ಮೋಟೋಕಾರ್ಪ್
author img

By

Published : Aug 12, 2022, 10:06 PM IST

ರಾಮನಗರ: ಸಮಾಜವನ್ನು ಉತ್ತಮಪಡಿಸಬೇಕೆನ್ನುವ ಬದ್ಧತೆಯಿಂದ ಮೋಟರ್ ಸೈಕಲ್ ಹಾಗೂ ಸ್ಕೂಟರ್​ಗಳ ವಿಶ್ವದ ಅತಿ ದೊಡ್ಡ ತಯಾರಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್, ಬೆಂಗಳೂರಿನಲ್ಲಿ ಕೋವಿಡ್ ಪೀಡಿತ 150 ಕುಟುಂಬಗಳನ್ನು ದತ್ತು ಪಡೆಯುವ ಮೂಲಕ ಆ ಕುಟುಂಬಗಳ ಹೊಣೆ ಹೊತ್ತುಕೊಂಡಿದೆ.

ಕೋವಿಡ್ ಕಾರಣದಿಂದ ತಂದೆ-ತಾಯಿ, ಪೋಷಕರನ್ನು ಕಳೆದುಕೊಂಡ ಮಕ್ಕಳನ್ನು ಮತ್ತು ಗಂಡನನ್ನು ಕಳೆದುಕೊಂಡ ಮಹಿಳೆಯರನ್ನು ಬೆಂಬಲಿಸುವ ಗುರಿಯನ್ನು ಈ ಸಂಸ್ಥೆ ಹೊಂದಿದೆ. ಒಡಿಶಾದ ವಾಣಿಜ್ಯ ಮತ್ತು ಕೈಗಾರಿಕೆಯಲ್ಲಿರುವ ಮಹಿಳಾ ಉದ್ಯಮಿಗಳ (ABWCI) ಸಂಘದ ಸಹಯೋಗದಲ್ಲಿ ಅಲ್ಲಿ 150 ಕುಟುಂಬಗಳನ್ನು ದತ್ತು ಪಡೆದುಕೊಂಡ ಬೆನ್ನಲ್ಲೇ ಹೀರೋ ಫಾರ್ ಹ್ಯುಮಾನಿಟಿ ಯೋಜನೆ ಅಡಿಯಲ್ಲಿ, ಬೆಂಗಳೂರಿನ 150 ಕುಟುಂಬಗಳನ್ನು ದತ್ತು ಪಡೆಯಲಾಗಿದೆ. ಈ ಯೋಜನೆಯ ಮೊದಲ ಹಂತದಲ್ಲಿ 35 ಕುಟುಂಬಗಳಿಗೆ ಬೆಂಗಳೂರಿನಲ್ಲಿ ಪರಿಹಾರದ ಪ್ಯಾಕೇಜ್‍ ವಿತರಿಸಲಾಯಿತು.

ಇದನ್ನೂ ಓದಿ: ನಾನು ಗುಡಿಸಲಲ್ಲೂ ಮಲಗಿದ್ದೇನೆ, ಪಂಚತಾರಾ ಹೋಟೆಲ್‌ನಲ್ಲೂ ಮಲಗಿದ್ದೇನೆ: ಹೆಚ್​ಡಿಕೆ

ಹೀರೋ ಮೋಟೋಕಾರ್ಪ್‍ನ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಮತ್ತು ಸಾಂಸ್ಥಿಕ ಸಂವಹನ ವಿಭಾಗದ ಮುಖ್ಯಸ್ಥರಾದ ಶೈಲೇಂದ್ರ ಕೆ ಬಿ ಮಾತನಾಡಿ, ಕೊರೊನಾ ಸಾಂಕ್ರಾಮಿಕ ಹಬ್ಬಿದ ಸಂದರ್ಭದಲ್ಲಿ ಹೀರ್ಫ್ ಮೋಟೋಕಾರ್ಪ್ ಇದನ್ನು ನಿರಂತರ ಬೆಂಬಲಿಸುತ್ತಾ ಅವರ ಕ್ಷೇಮಾಭಿವೃದ್ಧಿಗಾಗಿ ಕೆಲಸ ಮಾಡುತ್ತಾ ಬಂದಿದೆ. ಮಹಿಳೆಯರು ಉದ್ಯೋಗ ಪಡೆಯಲು ಮತ್ತು ದೀರ್ಘಾವಧಿಯಲ್ಲಿ ಸ್ವಾವಲಂಬಿಗಳಾಗಲು ನಾವು ಅವರಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.