ETV Bharat / state

'ನನ್ನ ಕೈ ಹಿಡಿದು ಕೈ ಎತ್ತಿರಲಿಲ್ಲವೇ?': ಸಿದ್ದರಾಮಯ್ಯ- ಡಿಕೆಶಿ ಒಗ್ಗಟ್ಟು ಪ್ರದರ್ಶನಕ್ಕೆ ಹೆಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯ - ಸಿದ್ದರಾಮಯ್ಯ

ರಾಮನಗರದಲ್ಲಿ ಗುರುವಾರ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಣ್ವ ಜಲಾಶಯಕ್ಕೆ ಬಾಗಿನ ಅರ್ಪಿಸಿದರು. ಬಳಿಕ ಬಿಜೆಪಿ ಮತ್ತು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

HD Kumaraswamy speak in Ramanagara
ಹೆಚ್​ ಡಿ ಕುಮಾರಸ್ವಾಮಿ
author img

By

Published : Aug 4, 2022, 3:47 PM IST

Updated : Aug 4, 2022, 9:27 PM IST

ರಾಮನಗರ: ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಕೈ ಎತ್ತಿ ಹಿಡಿದು ಒಗ್ಗಟ್ಟಿನ ಮಂತ್ರ ಜಪಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಇದು ಒಳ್ಳೆಯದಲ್ಲವೇ?.‌ ನನ್ನ ಕೈ ಹಿಡಿದುಕೊಂಡು ಕೈ ಎತ್ತಿರಲಿಲ್ಲವೇ?. ಕೈ ಎತ್ತೋದು ಕೈ ಇಳಿಸೋದು ಆಯಾಯ ಸಂದರ್ಭಕ್ಕೆ ತಕ್ಕಂತೆ ನಡೀತಿರುತ್ತವೆ ಎಂದು ತಿರುಗೇಟು ನೀಡಿದರು.

ಇದಕ್ಕೂ ಮುನ್ನ ರಾಮನಗರದ ಚನ್ನಪಟ್ಟಣ ತಾಲೂಕಿನ ಕಣ್ವ ಜಲಾಶಯಕ್ಕೆ ಹೆಚ್‌ಡಿಕೆ ದಂಪತಿ ಬಾಗಿನ ಅರ್ಪಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಡಿಕೆಶಿ ಹಾಗೂ ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಕೈ-ಕೈ ಹಿಡಿದು ಮೇಲಕ್ಕೆ ಎತ್ತಿದ್ದಾರೆ. ಈ ಹಿಂದೆ ಡಿ.ಕೆ.ಶಿವಕುಮಾರ್ ಅವರು ನನ್ನ ಕೈಯನ್ನೂ ಮೇಲೆ ಎತ್ತಿ ಹಿಡಿದಿರಲಿಲ್ಲವೇ?. ಇದೆಲ್ಲವನ್ನೂ ನಾನು ಕೂಡಾ ಮೈತ್ರಿ ಸರ್ಕಾರ ಇದ್ದಾಗ ನೋಡಿದ್ದೇನೆ. ಜನರನ್ನು ನಂಬಿಸಲು ಇಬ್ಬರೂ ಕೈ ಎತ್ತುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಯಾರ್ಯಾರು ಬೆನ್ನಿಗೆ ಚೂರಿ ಹಾಕಿಸಿಕೊಳ್ಳುತ್ತಾರೆ ನೋಡೋಣ ಬನ್ನಿ ಎಂದರು.

ಹೆಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯ

ಅಮಿತ್ ಶಾ ಎಚ್ಚರಿಕೆ ವಿಚಾರ: ಗೃಹ ಸಚಿವ ಆರಗ ಜ್ಞಾನೇಂದ್ರಗೆ ಮಾತ್ರ ಅಲ್ಲ. ಇಡೀ ಸರ್ಕಾರಕ್ಕೆ ಅಮಿತ್ ಶಾ ಎಚ್ಚರಿಕೆ ಕೊಡಬೇಕು. ಅಲ್ಲದೇ ರಾಜ್ಯದ ಎಲ್ಲಾ ಮಂತ್ರಿಗಳಿಗೂ ಎಚ್ಚರಿಕೆ​ ಕೊಡಬೇಕು ಎಂದು ಹೇಳಿದರು.

ಸಿಪಿವೈ ವಿರುದ್ದ ವಾಗ್ದಾಳಿ ನಡೆಸಿದ ಹೆಚ್​ಡಿಕೆ: ಅಭಿವೃದ್ಧಿ ಬಗ್ಗೆ ನಾನು ಏಕೆ ಮಾತನಾಡಲಿ ಎಂದು ಪ್ರಶ್ನಿಸಿದ ಹೆಚ್​ಡಿಕೆ, ಬಹುದೊಡ್ಡ ಯೋಜನೆಗಳನ್ನು ರೂಪಿಸಿರುವ ಅವರು ಬೊಂಬೆ ನಾಡಿನಲ್ಲಿ ಹಲವಾರು ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಅದರಲ್ಲೂ ಮೆಗಾಸಿಟಿ ಯೋಜನೆಯಲ್ಲಿ ಬಡವರ ಹೊಟ್ಟೆ ಮೇಲೆ ಹೊಡೆದು ಮಾಡಿದ್ದಾರಲ್ಲ. ಅದರಲ್ಲಿ ಈಗ ನಾನು ಹೆಮ್ಮೆ ಪಡೆಯಲು ಮುಂದಾಗಿದ್ಧೆನೆ ಎಂದು ಹೇಳುವ ಮೂಲಕ ಸಿ ಪಿ ಯೋಗೇಶ್ವರ್​ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಕಾಂಗ್ರೆಸ್​ನವರ ವೀಕ್ನೆಸ್​ ಮೇಲೆ ನಾವು ರಾಜಕೀಯ ಮಾಡುವುದಿಲ್ಲ: ಹೆಚ್ ಡಿ ಕುಮಾರಸ್ವಾಮಿ

ಮಾಜಿ ಸಚಿವರು ಹೇಳುತ್ತಿದ್ದಾರಲ್ಲ ತಾಲೂಕಿನಲ್ಲಿ ಯಾವ ಸಮಸ್ಯೆಗಳು ಇಲ್ಲ, ಜನತೆ ಸಮೃದ್ಧಿಯಿಂದ ಜೀವನವನ್ನು ಸಾಗಿಸುತ್ತಿದ್ದಾರೆ. ಪ್ರತಿಯೊಂದು ಅಭಿವೃದ್ಧಿ ಕೆಲಸಗಳು ಆಗಿವೆ. ಮಳೆಯಾದರು ಸಮಸ್ಯೆಗಳು ಇಲ್ಲ. ನಾನು ಪ್ರವಾಸ ಮಾಡಿದ್ದೇನೆ ಎಂದು ಹೇಳಿದ್ದಾರೆ. ಅದರ ಬಗ್ಗೆ ನಾನು ಏನು ಹೇಳಲಿ ಎಂದು ತಿಳಿಸಿದ ಅವರು ಎಲ್ಲಾ ನೀರಾವರಿ ಯೋಜನೆಗಳು ಸಂಪೂರ್ಣವಾಗಿ ಪೂರ್ಣವಾಗಿವೆ. ಹಾಗಾಗಿ ಅದರ ಬಗ್ಗೆ ನಾನು ಮಾತನಾಡುವುದು ಅಗತ್ಯವಿಲ್ಲ ಎಂದು ವ್ಯಂಗ್ಯವಾಡಿದರು.

Last Updated : Aug 4, 2022, 9:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.