ETV Bharat / state

ಬಲೂನು ತರಲು ಹೋದ ಬಾಲಕ ನಾಪತ್ತೆ: ಹುಡುಕಿ ಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ - ಹುಡುಕಿ ಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ

ಮನೆ ಮುಂದೆ ಆಟವಾಡುತ್ತಿದ್ದ ಬಾಲಕನೋರ್ವ ಕೂಗಳತೆ ದೂರದಲ್ಲಿದ್ದ ಅಂಗಡಿಯಲ್ಲಿ ಬಲೂನು ತರಲು ಹೋಗಿ ಬಳಿಕ ಕಾಣೆಯಾಗಿದ್ದಾನೆ. ಈ ಸಂಬಂಧ ಮಗುವಿನ ಪೋಷಕರು ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

four year old boy missing in ramanagara
ಬಲೂನು ತರಲು ಹೋದ ಬಾಲಕ ನಾಪತ್ತೆ, ಹುಡುಕಿ ಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ
author img

By

Published : Sep 18, 2020, 11:57 AM IST

Updated : Sep 18, 2020, 1:29 PM IST

ರಾಮನಗರ: ಮನೆ ಮುಂದೆ ಆಟವಾಡುತ್ತಿದ್ದ ಬಾಲಕನೋರ್ವ ಬಲೂನಿನ ಮೇಲೆ ಆಸೆಯಾಗಿ ಕೂಗಳತೆ ದೂರದಲ್ಲಿದ್ದ ಅಂಗಡಿಯಲ್ಲಿ ಬಲೂನು ತರಲು ಹೋದ ಬಳಿಕ ಕಾಣೆಯಾಗಿರುವ ಘಟನೆ ಮೆಹಬೂಬ್ ನಗರದಲ್ಲಿ ನಡೆದಿದೆ.

ಬಲೂನು ತರಲು ಹೋದ ಬಾಲಕ ನಾಪತ್ತೆ: ಹುಡುಕಿ ಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ

ಮೆಹಬೂಬ್ ನಗರದ ನಿವಾಸಿ ಸುಮೇರ್ ಖಾನ್ ಹಾಗೂ ಅಲ್ಮಜ್ ಬೇಗಂ ಅವರ 4 ವರ್ಷದ ಸಾಕು ಮಗ ದಯಾನ್ ಖಾನ್ ಕಾಣೆಯಾಗಿದ್ದಾನೆ. ಕಳೆದ ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಬಾಲಕ ಆಟವಾಡಿಕೊಂಡು ಮನೆಯಿಂದ ಹೊರ ಬಂದಿದ್ದಾನೆ. ಹೀಗೆ ಮನೆಯಿಂದ ಹೊರ ಬಂದ ಬಾಲಕನಿಗೆ ಮನೆಯ ಮುಂದೆ ಇದ್ದ ಅಂಗಡಿಯಲ್ಲಿನ ಬಲೂನಿನ ಮೇಲೆ ಆಸೆಯಾಗಿದೆ. ನಂತರ ಮನೆ ಒಳಗೆ ಹೋಗಿ ಅಮ್ಮನಿಂದ 5 ರೂ. ಪಡೆದು ಅಂಗಡಿಗೆ ಹೋಗಿದ್ದಾನೆ.

ಬಾಲಕ ಹಣ ಕೊಟ್ಟು ಬಲೂನ್ ಪಡೆದು ಅಂಗಡಿಯಿಂದ ಹಿಂತಿರುಗಿದ್ದಾನೆ.‌ ಆದರೆ ಮನೆ ಸೇರದೆ ಸೋಮವಾರ ರಾತ್ರಿಯಿಂದ ಕಾಣೆಯಾಗಿದ್ದಾನೆ. ಈ ಸಂಬಂಧ ಮಗುವಿನ ಪೋಷಕರು ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದಂಪತಿಗೆ ಮಕ್ಕಳಾಗಿರಲಿಲ್ಲ, ಹಾಗಾಗಿ ಅಲ್ಮಜ್ ಬೇಗಂ ಅವರ ಸಹೋದರ ಸಂಶೀರ್ ಖಾನ್ ಅವರ ಮಗುವನ್ನ ದತ್ತು ಪಡೆದು ಇವರೆ ಲಾಲನೆ ಪಾಲನೆ ಮಾಡುತ್ತಿದ್ದರು.

ಆದರೆ ಇದೀಗ ಆ ಬಾಲಕ ಕಣ್ಮರೆಯಾಗಿದ್ದು, ಇದು ಪೋಷಕರಿಗೆ ದುಃಖ ತರಿಸಿದೆ‌. ತಮ್ಮ ಮಗನನ್ನ ಕಾಣದೆ ತಾಯಿ ಅಲ್ಮಜ್ ಬೇಗಂ ಕುಗ್ಗಿ ಹೋಗಿದ್ದಾರೆ. ಮಗನ ಸುಳಿವು ಹಾಗೂ ಹುಡುಕಿ ಕೊಟ್ಟವರಿಗೆ 1 ಲಕ್ಷ ರೂ. ನಗದನ್ನ ಬಹುಮಾನ ರೂಪದಲ್ಲಿ ನೀಡಲಾಗುವುದು ಎಂದು ಹೇಳುತ್ತಿದ್ದಾರೆ.

Last Updated : Sep 18, 2020, 1:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.