ರಾಮನಗರ : ಸಿ ಪಿ ಯೋಗೇಶ್ವರ್ ವಸೂಲಿ ಬಗ್ಗೆ ಊರೂರುಗಳಲ್ಲಿ ಚರ್ಚೆ ಆಗುತ್ತಿದೆ. ಆದರೆ, ನಾನೇನು ಆರೋಪ ಮಾಡುತ್ತಿಲ್ಲ. ರಾಮನಗರ ಎಸಿ ಮೂಲಕ ವಸೂಲಿ ಮಾಡುತ್ತಿಲ್ವಾ?. ಈ ಸರ್ಕಾರದಲ್ಲಿ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿದೆ ಎಂದರು.
ನಾನು ನೇರವಾಗಿ ಹೇಳ್ತಿದ್ದೇನೆ. ಆ ಎಸಿ ನನಗೆ 3 ಕೋಟಿ ರೂ.ಗೆ ಆಫರ್ ಕೊಟ್ಟಿದ್ದರು. ಯೋಗೇಶ್ವರ್ ಲೆಟರ್ ಹೆಡ್‌ನ ಯಾವ ರೀತಿ ಬಳಸ್ತಿದ್ದಾರೆಂದು ಜನರಿಗೆ ಗೊತ್ತಿದೆ ಎಂದು ಬಿಜೆಪಿ ಎಂಎಲ್ಸಿ ಸಿ ಪಿ ಯೋಗೇಶ್ವರ್ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಯೋಗೇಶ್ವರ್ ಮಂತ್ರಿ ಸ್ಥಾನದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಕುಟುಂಬ ಯಾರಿಗೂ ರಾಜಿಯಾಗಲ್ಲ. ಪ್ರಧಾನಮಂತ್ರಿಯನ್ನೇ ನೋಡಿರುವ ಕುಟುಂಬ ನಮ್ಮದು. ಹಾಗಾಗಿ, ಒಂದು ಮಂತ್ರಿ ಸ್ಥಾನಕ್ಕೆ ಹೆದರುತ್ತೇನಾ.. ಯೋಗೇಶ್ವರ್ ಮಂತ್ರಿಯಾಗಿದ್ದಾಗಲೇ ಸೋಲಿಸಿದ್ದೇವೆ.
ಈಗ ಚನ್ನಪಟ್ಟಣಕ್ಕೆ ಹೋಗಲಿಲ್ಲ. ಆದರೂ ಜನ ನನಗೆ ಆಶೀರ್ವಾದ ಮಾಡಿಲ್ವೇ.. ಇಂತಹ ಮಂತ್ರಿ ಸ್ಥಾನಗಳನ್ನು ಎಷ್ಟು ನೋಡಿಲ್ಲ ನಾನು ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಜೊತೆಗೆ ಬಂದ 17 ಜನರಲ್ಲಿ ಯಾರನ್ನೂ ಸಿಎಂ ಕೈ ಬಿಡುವುದಿಲ್ಲ: ಸಚಿವ ರಮೇಶ್ ಜಾರಕಿಹೊಳಿ