ರಾಮನಗರ : ನಗರದಲ್ಲಿ ಚರಂಡಿ ದುರಸ್ತಿ ಮಾಡುವ ವೇಳೆ ಸುಮಾರು 20ಕ್ಕೂ ಹೆಚ್ಚು ಹಾವಿನ ಮರಿಗಳು ಸಿಕ್ಕಿವೆ.
ನಗರದ ಗಾಂದಿನಗರದಲ್ಲಿನ ಮೋರಿಯೊಂದನ್ನು ಕ್ಲೀನ್ ಮಾಡಿ ದುರಸ್ತಿ ಮಾಡುವ ವೇಳೆ ಕೊಳಕು ಮಂಡಲ ಜಾತಿಗೆ ಸೇರಿದ 20 ಮರಿಗಳು ಸಿಕ್ಕಿದ್ದು, ದೊಡ್ಡ ಹಾವಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ದೊಡ್ಡ ಹಾವು ಪತ್ತೆಯಾಗಿಲ್ಲ. ಉರಗ ತಜ್ಞ ಈ ಎಲ್ಲಾ ಮರಿಗಳನ್ನು ಸಂರಕ್ಷಿಸಿದ್ದು, ಅರಣ್ಯ ಪ್ರದೇಶಕ್ಕೆ ಬಿಡುವುದಾಗಿ ತಿಳಿಸಿದ್ದಾರೆ.
ಹಾವಿನಮರಿಗಳ ನಾಶಕ್ಕೆ ಒತ್ತಾಯ :
ಕೊಳಕು ಮಂಡಲದ ಹಾವುಗಳು ಅಪಾಯಕಾರಿ. ಆದ್ದರಿಂದ ಮರಿಗಳ ನಾಶಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ.