ETV Bharat / state

ದೇಶ ಕಾಯೋಕೆ ಯಡಿಯೂರಪ್ಪ, ಈಶ್ವರಪ್ಪರ ಮಕ್ಕಳನ್ನು ಕಳುಹಿಸ್ತಾರಾ: ಹೆಚ್​ಡಿಕೆ

ಬಡವರು, ಹಸಿವಿನಿಂದ ನರಳುವವರು, ಶ್ರಮಿಕರು ಸೈನ್ಯ ಸೇರುತ್ತಾರೆ ಅಂತಾ ನಾನು ಹೇಳಿರುವುದರಲ್ಲಿ ಯಾವ ಅಪರಾಧವಿಲ್ಲ ಎಂದು ಮಾಜಿ ಸಿಎಂ ಹೆಚ್​ಡಿಕೆ ಸಮರ್ಥಿಸಿಕೊಂಡಿದ್ದಾರೆ.

farmer cm h.d.kumarswamy
ಜೆಡಿಎಸ್​ ಪಕ್ಷದ ಶಾಸಕಾಂಗ ನಾಯಕ ಹೆಚ್​.ಡಿ.ಕುಮಾರಸ್ವಾಮಿ
author img

By

Published : Jan 20, 2020, 6:06 AM IST

ರಾಮನಗರ: ಸಿಎಂ ಯಡಿಯೂರಪ್ಪ, ಸಚಿವ ಕೆ.ಎಸ್.ಈಶ್ವರಪ್ಪ ಅವರು ತಮ್ಮ ಮಕ್ಕಳನ್ನು ದೇಶ ಕಾಯಲು ಕಳುಹಿಸುತ್ತಾರಾ? ಇಲ್ಲ, ಬಡವರು, ಹಸಿವಿನಿಂದ ನರಳುವವರು, ಶ್ರಮಿಕರು ಸೈನಿಕರಾಗಿ ಸೇರುತ್ತಾರೆ ಎಂದು ಹೇಳಿರುವ ನನ್ನ ಹೇಳಿಕೆಯಲ್ಲಿ ಯಾವ ತಪ್ಪಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಜೆಡಿಎಸ್​ ಪಕ್ಷದ ಶಾಸಕಾಂಗ ನಾಯಕ ಹೆಚ್​.ಡಿ.ಕುಮಾರಸ್ವಾಮಿ

ಬಿಡದಿ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದ ನಂತರ ಮಾತನಾಡಿದ ಅವರು, ಈಶ್ವರಪ್ಪ ನಾಲಿಗೆಗೆ ಕಡಿವಾಣ ಹಾಕಿಕೊಳ್ಳಬೇಕು. ಮಾತಿನ ಚಪಲ ತೀರಿಸಿಕೊಳ್ಳಲು ಮಾತನಾಡುವುದಲ್ಲ ಎಂದು ಸಚಿವ ಕೆ.ಎಸ್​.ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರಿನ ಸಭೆಯಲ್ಲಿ ಕಲ್ಲು ಎಸೆದಿರುವ ಬಗ್ಗೆ ಆಗ ಏನನ್ನೂ ಹೇಳದೆ ಈಗ ಯಾಕೆ ಕೇಳುತ್ತಿದ್ದಾರೆ. ಇಲ್ಲಿ ಒಡೆದು ಆಳಲು ಹೊರಟಿದ್ದಾರೆ. ಅಧಿಕಾರಗಳು ದಾರಿ ತಪ್ಪಬಾರದು ಎಂದು ಎಚ್ಚರಿಕೆ ನೀಡಿದರು.

Intro:Body:ರಾಮನಗರ : ಈಶ್ವರಪ್ಪ ನಾಲಿಗೆಗೆ ಕಡಿವಾಣ ಹಾಕಿಕೊಳ್ಳಬೇಕು, ಅಂದು ಯಡಿಯೂರಪ್ಪ, ಈಶ್ವರಪ್ಪ ಅವರ ಮಕ್ಕಳನ್ನ ಕಳಿಸ್ತಾರಾ ಸೈನ್ಯಕ್ಕೆ ಎಂದು ನಾನು ಹೇಳಿದ್ದೇ ಅದರಲ್ಲಿ ತಪ್ಪೇನಿದೆ, ನಾನು ಈಶ್ವರಪ್ಪ ಬಳಿ ಸಲಹೆ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಅವರು ತಮ್ಮ ಬಾಯಿ ಚಪಲ, ತೆವಲು ಗೋಸ್ಕರ ಬಾಯಿಗೆ ಬಂದಂತೆ ಮಾತನಾಡಬಾರದು ಎಂದು ಮಾಜಿ‌ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಬಿಡದಿ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ‌ ಶಂಕುಸ್ಥಾಪನೆ‌ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ನಾನು ಹಿಂದೆ ಉದ್ಯೋಗ ಇಲ್ಲದವರು ಸೈನ್ಯಕ್ಕೆ ಸೇರಿದ್ದಾರೆ ಯಡಿಯೂರಪ್ಪಾ ಮತ್ತು ಈಶ್ವರಪ್ಪಾ ಮಕ್ಕಳನ್ನ ಸೈನ್ಯಕ್ಕೆ ಸೇರಿಸಿದ್ದಾರಾ ಅವರಲ್ಲಿನ ಸಮಸ್ಯೆ ಬಗ್ಗೆ ಹಲವಾರು ಸೈನಿಕರು ನನ್ನ ಬಳಿ ಹೇಳಿಕೊಂಡಿದ್ದಾರೆ ಎಂದ ಅವರು ಈ ವಿಚಾರಕ್ಕೆ ಈಶ್ವರಪ್ಪ ನಾಲಗೆ ಹರಿಬಿಟ್ಟು ತಾವು ಯಾವ ಕೆಟಗರಿ ಅಂತಾ ಹೇಳಿಕೊಂಡಿದ್ದಾರೆ ಅಷ್ಟೇ ಎಂದು ಲೇವಡಿ‌ ಮಾಡಿದರು.
ಚಕ್ರವರ್ತಿ ಸೂಲಿಬೆಲೆ, ತೇಜಸ್ವಿ ಸೂರ್ಯ ಹತ್ಯೆಗೆ ಯತ್ನ ವಿಚಾರಕ್ಕೆ ಸಂಬಂದಿಸಿದಂತೆ ಅವರೇನು ದೇಶಕ್ಕಾಗಿ ಹೋರಾಡಿದವರೇ.
ಮಂಗಳೂರು ಗಲಬೆಯಲ್ಲಿ ಕಲ್ಲು ಹೊಡೆದ ವಿಚಾರ ಅವತ್ತು ಯಾಕೇ ಹೇಳಲಿಲ್ಲ, ವಿಷ್ಯವನ್ನ ಬೇರೆ ಕಡೆ ತಿರುಗಿಸಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಅಧಿಕಾರಿಗಳು ತಮ್ಮ ಕೊರಳಿಗೆ ತಾವೇ ಹಗ್ಗ ಹಾಕಿಕೊಳ್ಳಬೇಡಿ ನಾನು ನಿಜಾಂಶ ಸಂಗ್ರಹಿಸುವ ಕೆಲಸ ಮಾಡ್ತಿದ್ದೇನೆ ಪ್ರಚೋದಿಸುವ ಕೆಲಸವನ್ನು ಅಧಿಕಾರಿಗಳು ಮಾಡಬಾರದು ಎಂದರು.
ಬಿಡದಿಯ ಕೇತುಗಾನಹಳ್ಳಿ ಗ್ರಾಮದಲ್ಲಿರುವ 42 ಎಕರೆ ಜಮೀನು‌ ವಿವಾದಕ್ಕೆ ಇನ್ನೂ ಕೋರ್ಟ್ ಗೆ ನಾನು ಅಲೆಯುತ್ತಲೇ ಇದ್ದೇನೆ. ನಾನು ರಾಜಕೀಯಕ್ಕೂ ಬರುವ ಮುನ್ನ ಸಿನಿಮಾ ರಂಗದಲ್ಲಿರುವಾಗ ಈ ಜಮೀನು ಖರೀದಿ ಮಾಡಿದ್ದೇನೆ. ನಾನು ಎಲ್ಲಿ ದಲಿತರನ್ನ ಒಕ್ಕಲೆಬ್ಬಿಸಿ ಜಮೀನು‌ ಖರೀದಿ ಮಾಡಿದ್ದೇನೆ ನೀವೆ ಹೇಳಿ... ನ್ಯಾಯವಾಗಿ ಸರ್ವೇ ಮಾಡಿದ್ರೆ ಇನ್ನೂ ಎರಡು ಎಕರೆ ಸರ್ಕಾರ ನನಗೆ ಜಮೀನು ಕೊಡಬೇಕು1985 ರಿಂದ ಜಮೀನು ವಿವಾದ ನಡೆಯುತ್ತಲೇ ಇದೆ ನಾನು ಯಾವುದೇ ಒತ್ತುವರಿ ಮಾಡಿಕೊಂಡಿಲ್ಲ ಪ್ರಾಮಾಣಿಕವಾಗಿ ಬದುಕುವುದು ಕಷ್ಟಸಾಧ್ಯವಾಗಿದೆ ನಾನು ರಾಜಕಾರಣಕ್ಕೆ ಬಂದು ಹಣ ಮಾಡಿಲ್ಲ ಎಂದ ಅವರು ನಾನು ಸತ್ತಾಗ ಇದೇ ಮಣ್ಣಿಗೆ ನನ್ನನ್ನೂ ಹೂಳುವುದು ಎಂದು ಬಾವುಕರಾದರು.
ಇದೇ ವೇಳೆ ಜಿಲ್ಲೆಯ ಜನಪ್ರತಿನಿಧಿಗಳನ್ನ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎನ್ನುವ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿ ಜಿಲ್ಲಾಡಳಿತ ಸರ್ಕಾರ ಜನರ ಆಶೋತ್ತರಗಳಿಗೆ ಪೂರಕವಾಗಿ ಕೆಲಸ‌ಮಾಡಬೇಕೆಂದು ಸಲಹೆ ನೀಡಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.