ರಾಮನಗರ: ರಾಮನಗರ ತಾಲ್ಲೂಕಿನ ವಿವಿಧೆಡೆ ಇಂದು ಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನ ತಲ್ಲಣಗೊಂಡಿದ್ದಾರೆ. ಇಂದು ಬೆಳಗ್ಗೆ 5.30ರ ಸುಮಾರಿಗೆ ಭಾರಿ ಶಬ್ದದೊಂದಿಗೆ ಮೂರು ಬಾರಿ ಭೂಕಂಪನದ ಅನುಭವ ಆಗಿದ್ದು, ಇದರಿಂದ ಹೆದರಿದ ಜನರು ಮನೆಗಳಿಂದ ಹೊರಗೆ ಬಂದಿರುವುದಾಗಿ ಸ್ಥಳೀಯರು ಹೇಳಿದ್ದಾರೆ.
ರಾಮನಗರ ತಾಲ್ಲೂಕಿನ ಬೆಜ್ಜರಹಳ್ಳಿಕಟ್ಟೆ, ಗುಡ್ಡೆ ತಿಮ್ಮಸಂದ್ರ, ಪಾದರಹಳ್ಳಿ, ಸೇರಿದಂತೆ ಸುತ್ತಲಿನ ಗ್ರಾಮಗಳ ಜನರಿಗೆ ಈ ರೀತಿಯ ಅನುಭವ ಆಗಿದೆ. ಒಂದೆಡೆ ಮಳೆಯಾರ್ಭಟ ಕಡಿಮೆಯಾಗಿದ್ರೆ ಮತ್ತೊಂದೆಡೆ ಭೂಕಂಪನದ ಅನುಭವವಾಗ್ತಿದೆಯಂತೆ.
ಭಾರಿ ಮಳೆಗೆ ರಾಮನಗರ ತತ್ತರಿಸಿ ಹೋಗಿತ್ತು. ಇಂದು ಬೆಳಗ್ಗೆ ರಾಮನಗರದ ಹಲವೆಡೆ ಭೂಕಂಪನದ ಅನುಭವವಾಗಿದ್ದು, ಸತತ ಮೂರು ಬಾರಿ ಭೂಮಿ ಕಂಪಿಸಿದ್ದು, ಜನ ಭಯಭೀತರಾಗಿದ್ದಾಗಿ ಸ್ಥಳಿಯರೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಕಲಬುರಗಿಯಲ್ಲಿ ವರುಣನ ಅಬ್ಬರ: ಹಲವಡೆ ಸಂಪರ್ಕ ಕಡಿತ, ಶಾಲಾ ಮಕ್ಕಳು, ರೈತರು ತತ್ತರ