ರಾಮನಗರ: ಬಿಡದಿ ಬಳಿಯ ಖಾಸಗಿ ಈಗಲ್ ಟನ್ ರೆಸಾರ್ಟ್ನಲ್ಲಿನ ವಿಲ್ಲಾದ ಮಾಲೀಕರನ್ನ ಕಿಡಿಗೇಡಿಗಳು ಹತ್ಯೆ ಮಾಡಿದ್ದಾರೆ. ಬಿಡದಿಯ ಈಗಲ್ ರೆಸಾರ್ಟ್ನ C ಬ್ಲಾಕ್ನಲ್ಲಿ ಈ ಜೋಡಿ ಕೊಲೆ ನಡೆದಿದೆ
ಗಂಡ - ಹೆಂಡತಿಯನ್ನು ಮನೆಯ ಎರಡು ಪ್ರತ್ಯೇಕ ಕೋಣೆಗಳಲ್ಲಿ ಸುತ್ತಿಗೆಯಲ್ಲಿ ಹೊಡೆದು ಕೊಲೆ ಮಾಡಲಾಗಿದ್ದು, ಹಣಕ್ಕಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಆಶಾ (63), ರಘುರಾಜ್ (70) ಕೊಲೆಯಾದ ಮೃತ ದಂಪತಿಗಳು. ರಘುರಾಜ್ ಮಾಜಿ ಏರ್ ಫೋರ್ಸ್ ಪೈಲಟ್ ಆಗಿದ್ದು, ಸುಮಾರು ವರ್ಷಗಳಿಂದ ಇಲ್ಲೇ ವಾಸವಾಗಿದ್ದರು. ಮನೆ ಕೆಲಸದವರೇ ಮರ್ಡರ್ ಮಾಡಿರುವ ಶಂಕೆ ಇದ್ದು, ರಾಮನಗರ ಎಸ್ಪಿ ಸಂತೋಷ್ ಬಾಬು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆ ಕಾವಲಿಗಿದ್ದ ಸೆಕ್ಯೂರಿಟಿ ಪರಾರಿಯಾಗಿದ್ದಾನೆ.
ಜೋಡಿ ಕೊಲೆ ಪ್ರಕರಣ ಬಿಡದಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.
ಇದನ್ನೂ ಓದಿ: ಮಂಡ್ಯ: ನೂರಾರು ಕೇಸರಿ ಶಾಲು ತೊಟ್ಟ ವಿದ್ಯಾರ್ಥಿಗಳ ವಿರುದ್ಧ ಮುಸ್ಲಿಂ ವಿದ್ಯಾರ್ಥಿನಿ ಏಕಾಂಗಿ ಹೋರಾಟ!