ETV Bharat / state

ನಾನೇ ಮುಂದಿನ ಸಿಎಂ, ಮೊದಲ ಕ್ಯಾಬಿನೆಟ್‌ನಲ್ಲೇ ಗ್ಯಾರಂಟಿಗಳಿಗೆ ಅನುಮೋದನೆ: ಡಿಕೆಶಿ - ಕರ್ನಾಟಕ ಚುನಾವಣೆ 2023 ವಿಧಾನಸಭೆ ಚುನಾವಣೆ

ರಾಮನಗರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಗಂಗಾಧರ್ ಪರವಾಗಿ ಶನಿವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ ಪ್ರಚಾರ ನಡೆಸಿದರು.

cng
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ ಪ್ರಚಾರ
author img

By

Published : May 7, 2023, 7:02 AM IST

Updated : May 7, 2023, 1:38 PM IST

ರಾಮನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ ಪ್ರಚಾರ

ರಾಮನಗರ: ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದವರೇ ನಮ್ಮಲ್ಲಿ ಮುಖ್ಯಮಂತ್ರಿ ಆಗುತ್ತಾರೆ ಎನ್ನುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದೀಗ ನಾನೇ ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿದ್ದಾರೆ. ಶನಿವಾರ ನಡೆದ ಕಾಂಗ್ರೆಸ್ ಪ್ರಚಾರದಲ್ಲಿ ಮಾತನಾಡಿದ ಅವರು, ಈ ಕ್ಷೇತ್ರದಲ್ಲಿ ಎಲ್ಲರಿಗೂ ಅವಕಾಶ ಕೊಟ್ಟಾಗಿದೆ. ನಿಮ್ಮ ಮನೆ ಮಗ ಡಿಕೆಶಿಗೆ ಒಂದು ಅವಕಾಶ ನೀಡಿ. ಮೇ. 13ಕ್ಕೆ ಫಲಿತಾಂಶ ಬರಲಿದೆ. ನಾನೇ ರಾಜ್ಯದ ಮುಖ್ಯಮಂತ್ರಿ ಆಗುತ್ತೇನೆ. ಸಿಎಂ ಆದ ಮೊದಲ ಕ್ಯಾಬಿನೆಟ್​ನಲ್ಲೇ ಕಾಂಗ್ರೆಸ್ ಗ್ಯಾರಂಟಿಗಳಿಗೆ ಅನುಮೋದನೆ ನೀಡುವುದಾಗಿ ಘೋಷಿಸಿದರು.

ತಾಲೂಕಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಗಂಗಾಧರ್ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಿಮಿಸಿದ ಡಿಕೆಶಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ನಗರದ ಸ್ಪನ್ ಸಿಲ್ಕ್​ನಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊರಟ ಪ್ರಜಾ ಧ್ವನಿಯಾತ್ರೆಗೆ ಗಾಂಧಿ ಭವನದ ಮುಂದೆ ಬೃಹತ್ ಸೇಬಿನ ಹಾರ ಹಾಕಲಾಯಿತು. ಹೆದ್ದಾರಿಯಲ್ಲಿಯೇ ಹಾಕಿದ್ದ ವೇದಿಕೆಯಲ್ಲಿ ಕೆಪಿಸಿಸಿ ಅಧ್ಯಕ್ಷರು ಮಾತನಾಡಿ, ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಯ ವಿರುದ್ದ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ 140 ರಿಂದ 150 ಸ್ಥಾನ ಪಡೆದು ಅಧಿಕಾರಕ್ಕೆ ಬರಲಿದೆ. ನಾವು ಯಾವುದೇ ಕುತಂತ್ರಕ್ಕೆ ಬೆದರುವುದಿಲ್ಲ. ಬಿಜೆಪಿ ಸರ್ಕಾರ ಮೀಸಲಾತಿ ಬಗ್ಗೆ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಮೀಸಲಾತಿ ಎಂಬ ಜೇನುಗೂಡಿಗೆ ಕೈ ಹಾಕಿದೆ. ಸರ್ಕಾರದ ಮೀಸಲಾತಿ ನೀತಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಬರೀ ಸುಳ್ಳು ಹಾಗೂ ಮೋಸ ಮಾಡಿಕೊಂಡು ಸರ್ಕಾರ ಕಾಲ ಕಳೆಯುತ್ತಿದೆ. ಕರ್ನಾಟಕದ ಜನರು ದಡ್ಡರಲ್ಲ. ಒಕ್ಕಲಿಗರು ಹಾಗೂ ಲಿಂಗಾಯತರನ್ನು ಭಿಕ್ಷುಕರಾಗಿ ಮಾಡಲಾಗುತ್ತಿದೆ ಎಂದರು.

ಹೆಚ್‌ಡಿಕೆ ವಿರುದ್ಧ ಟೀಕೆ: ಕ್ಷೇತ್ರದ ಶಾಸಕರಾಗಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ 5 ವರ್ಷ ಆಡಳಿತ ಮಾಡಿ ಕ್ಷೇತ್ರಕ್ಕೆ ಏನು ಅಭಿವೃದ್ಧಿ ಮಾಡಿದ್ದಾರೆ?. ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಣ್ಣನ ಸರ್ಕಾರ ಉಳಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡಿರುವುದನ್ನು ನೀವೆಲ್ಲರೂ ನೋಡಿದ್ದೀರಿ. ಐದು ವರ್ಷದಲ್ಲಿ ಕುಮಾರಸ್ವಾಮಿ ಸಾಕಷ್ಟು ಅಭಿವೃದ್ಧಿ ಮಾಡಬಹುದಿತ್ತು. ಆದರೆ ಮಾಡಲಿಲ್ಲ. ಇದಲ್ಲದೆ ಒಬ್ಬ ಕಾರ್ಯಕರ್ತರಿಗೂ ಕೂಡ ಅಧಿಕಾರ ನೀಡಲಿಲ್ಲ. ಅವರು ಅಧಿಕಾರದಲ್ಲಿದ್ದಾಗ ಒಬ್ಬರೇ ಒಬ್ಬರು ಕಾರ್ಯಕರ್ತರಿಗೆ ಅವಕಾಶ ನೀಡಿರುತ್ತಿದ್ದರೆ ಅವರಿಗೆ ನೀವು ಮತ ನೀಡಿ ಅಂತ ನಾನೇ ಹೇಳುತ್ತೇನೆ. ಅಧಿಕಾರವಿದ್ದಾಗ ಯಾರನ್ನೂ ಕೂಡ ಅವರು ಬೆಳೆಸಲಿಲ್ಲ ಎಂದು ಹೇಳಿದರು.

ಪ್ರಸ್ತುತ ಬಿಜೆಪಿ ಅಭ್ಯರ್ಥಿಯಾಗಿರುವ ಸಿ.ಪಿ.ಯೋಗೇಶ್ವರ್​ರವರಿಗೂ ಕೂಡ 20 ವರ್ಷ ಅಧಿಕಾರ ನೀಡಿದ್ದೀರಿ. ಅವರನ್ನು ಕೂಡ ಎರಡು ಸಲ ಸಚಿವರನ್ನಾಗಿ ಮಾಡಿದ್ದೀರಿ. ಪ್ರಸ್ತುತ ಅವರು ಎಂಎಲ್ಸಿ ಆಗಿದ್ದಾರೆ. ಇಲ್ಲಿ ಎಲ್ಲ ಜಾತಿಯವರಿಗೂ ಕೂಡ ಅವಕಾಶ ನೀಡಿದ್ದೀರಿ. ಈಗ ಹಿಂದುಳಿದ ನಾಯಕರಾಗಿರುವ ಗಂಗಾಧರ್‌ಗೆ ಅವಕಾಶ ನೀಡುವಂತೆ ಡಿಕೆಶಿ ಮನವಿ ಮಾಡಿದರು.

ಇದನ್ನೂ ಓದಿ: ಖರ್ಗೆ ಕುಟುಂಬ ಹತ್ಯೆ ಆಡಿಯೋ ಆರೋಪ: ಸೈಬರ್ ಕ್ರೈಂ​​ಗೆ ಬಿಜೆಪಿ‌ ಅಭ್ಯರ್ಥಿ ಮಣಿಕಂಠ ರಾಠೋಡ್​​ ದೂರು

Last Updated : May 7, 2023, 1:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.