ETV Bharat / state

ಉಯ್ಯಂಬಳ್ಳಿ ಗ್ರಾ.ಪಂನಿಂದ 10,000ಕ್ಕೂ ಹೆಚ್ಚು ಜನರಿಗೆ ಜ್ವರ​ ಪರೀಕ್ಷೆ..! - ರಾಮನಗರ ಸುದ್ದಿ

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ 10,000ಕ್ಕೂ ಹೆಚ್ಚು ಜನರಿಗೆ ಡಿಜಿಟಲ್ ಥರ್ಮೋಮೀಟರ್​ನಿಂದ ಆರೋಗ್ಯ ತಪಾಸಣೆ ನಡೆಸಲಾಗಿದೆ.

Digital thermometer test for over 10,000 people in Uyyamballi Gram Panchayat
ಉಯ್ಯಂಬಳ್ಳಿ ಗ್ರಾಮಪಂಚಾಯಿತಿಯಿಂದ 10,000ಕ್ಕೂ ಹೆಚ್ಚು ಜನರಿಗೆ ಡಿಜಿಟಲ್ ಥರ್ಮೋಮೀಟರ್​ ಪರೀಕ್ಷೆ..!
author img

By

Published : May 8, 2020, 12:58 PM IST

ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಗ್ರಾಮ ಪಂಚಾಯಿತಿಯಿಂದ ಆಶಾ ಕಾರ್ಯಕರ್ತರ ಸಹಾಯದೊಂದಿಗೆ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಲಾಯಿತು.

ಉಯ್ಯಂಬಳ್ಳಿ ಗ್ರಾಮಪಂಚಾಯಿತಿಯಿಂದ 10,000ಕ್ಕೂ ಹೆಚ್ಚು ಜನರಿಗೆ ಡಿಜಿಟಲ್ ಥರ್ಮೋಮೀಟರ್​ ಪರೀಕ್ಷೆ..!

ಡಿಜಿಟಲ್ ಥರ್ಮೋಮೀಟರ್​ನಿಂದ ಪಂಚಾಯಿತಿ ವ್ಯಾಪ್ತಿಯಲ್ಲಿನ ಜನರಿಗೆ ಮೊದಲ ಬಾರಿಗೆ ತಪಾಸಣೆ ನಡೆಸಲಾಯಿತು. ತಾಲೂಕಿನಲ್ಲಿ ಒಟ್ಟು 3 ಥರ್ಮೋಮೀಟರ್ ಇದ್ದು, ಒಂದನ್ನ ದೊಡ್ಡ ಆಲಹಳ್ಳಿ ಜಿಲ್ಲಾ ಪಂಚಾಯಿತಿ​ಗೆ ನೀಡಲಾಗಿದೆ. ಇನ್ನುಳಿದ ಎರಡನ್ನ ಉಯ್ಯಂಬಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಬಳಸಲಾಗುತ್ತಿದೆ. ಉಯ್ಯಂಬಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಸಾವಿರಕ್ಕೂ ಹೆಚ್ಚು ಜನರ ಟೆಸ್ಟಿಂಗ್ ನಡೆದಿದೆ. ಕನಕಪುರ ಕ್ಷೇತ್ರದಲ್ಲಿ ಮೊದಲ ಬಾರಿಗೆ ಈ ರೀತಿಯ ಆರೋಗ್ಯ ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಜನರು ಕೂಡ ನಮ್ಮ ಕಾರ್ಯಕ್ಕೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.

ಆಶಾ ಕಾರ್ಯಕರ್ತೆ ಶೃತಿ ಮಾತನಾಡಿ, ಥರ್ಮೋಮೀಟರ್ ಬಳಸಿ ಗ್ರಾಮದ ಪ್ರತಿ ಮನೆಗೆ ತೆರಳಿ ಆರೋಗ್ಯ ಪರೀಕ್ಷೆ ಮಾಡಿದ್ದೇವೆ. ಯಾರಿಗಾದರೂ ತಾಪಮಾನ ಹೆಚ್ಚಿದ್ದರೆ, ಅಂತಹವರನ್ನ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತೇವೆ. ಇದರಿಂದ‌ ಕೊರೊನಾ ರೋಗ ಲಕ್ಷಣಗಳನ್ನ ಪತ್ತೆ ಹಚ್ಚಲು ಸಹಕಾರಿಯಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.