ರಾಮನಗರ : ನನಗೆ ಏನು ಸತ್ಯ ಗೊತ್ತಿತ್ತು ಅದರ ಆಧಾರದ ಮೇಲೆ ಹೇಳಿದ್ದೆ. ಅವತ್ತು ಸಿಒಡಿಯವರು ಕರೆದುಕೊಂಡು ಹೋಗಿದ್ದರು. ಮತ್ತೆ ಕಳುಹಿಸಿದ್ದರು. ವಿಚಾರಣೆ ಮಾಡದೇ ಹೇಗೆ ಹೇಳಲು ಸಾಧ್ಯ, ಫೋನ್ ಯಾರು ಮಾಡಿದ್ದರು, ಯಾಕೆ ಮಾಡಿದ್ದರು ಎಂಬುದು ಹೇಳಿರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ರಾಮನಗರ ಜಿಲ್ಲೆ ಕನಕಪುರದ ಯಡಮಾರನಹಳ್ಳಿ ಗ್ರಾಮದಲ್ಲಿ ಪಿಎಸ್ಐ ಅಕ್ರಮ ನೇಮಕಾತಿಯಲ್ಲಿ ಮಾಗಡಿಯ ದರ್ಶನ್ ಗೌಡ ಅರೆಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಪಿಎಸ್ಐ ಅಕ್ರಮ ನೇಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹಳ ಅಬ್ಬರದಿಂದ ಸರ್ಕಾರದವರು, ಮಂತ್ರಿಗಳು ಮಾತನಾಡುತ್ತಿದ್ದಾರೆ.
ಈಗ ಕರೆದುಕೊಂಡು ಹೋಗಿದ್ದಾರೆ, ನಮಗೆ ಎಲ್ಲಾ ಗೊತ್ತಿತ್ತು. ನಮ್ಮ ಜಿಲ್ಲೆಯಲ್ಲಿ ಎಷ್ಟು ಜನ ಪಾಸಾಗಿದ್ದಾರೆ ಅನ್ನೋದು, ಮುಚ್ಚೋಕೆ ಏನೇನು ಪ್ರಯತ್ನ ಮಾಡಿದ್ದರು ಅನ್ನೋದು ಗೊತ್ತು ಎಂದರು.
ಈಗ ಕರೆದುಕೊಂಡು ಹೋಗಿ ಎಫ್ಐಆರ್ ಫೈಲ್ ಮಾಡಿದ್ದಾರೆ. ಪಾಪ ಆ ಹುಡುಗರು ಬಾಳೆಹಣ್ಣು ತಿನ್ನೋಕೆ ಬಂದೋರು, ಅಂಗಡಿ ಓಪನ್ ಇದ್ದರೆ ವ್ಯಾಪಾರಕ್ಕೆ ಬರ್ತಾರೆ. ಇದರಲ್ಲಿ ಯಾವ ರಾಜಕಾರಣಿ, ಆಫೀಸರ್ ಇದ್ದರೂ ಹೊರ ತರಬೇಕು. ಬರೀ 18-20 ಹುಡುಗರನ್ನು ಅರೆಸ್ಟ್ ಮಾಡಿದರೆ ಸಾಲುವುದಿಲ್ಲ. ನಮ್ಗೂ ಎಲ್ಲಾ ವಿಚಾರ ಗೊತ್ತಿದೆ.
ಒಬ್ಬನಿಗೆ ಪ್ರತ್ಯೇಕವಾಗಿ ಇನ್ ಸರ್ವೀಸ್ ಆರ್ಡರ್ ಮಾಡಿದ್ದಾರೆ, ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಹಾಗೆಯೇ ಬಹಳದೊಡ್ಡ ಭ್ರಷ್ಟಾಚಾರದ ಕೂಪ ಕರ್ನಾಟಕದಲ್ಲಿದೆ. ಎಲ್ಲಾ ನೇಮಕಾತಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ನಮ್ಮ ಹೋರಾಟ ನಡೆಯಲಿದೆ. ನನ್ನ ಹೋರಾಟ ಇದೊಂದೇ ಅಲ್ಲ, ಎಲ್ಲಾ ನಿರುದ್ಯೋಗಿ ಯುವಕರ ಹಿತದೃಷ್ಟಿಯಿಂದ ಮಾಡಲಾಗುವುದು ಎಂದರು.
ಇದನ್ನೂ ಓದಿ: ನಿಮ್ಮ ಚಡ್ಡಿ ಗಟ್ಟಿ ಮಾಡಿಕೊಳ್ಳುವ ಪ್ರಯತ್ನ ಮಾಡಿ, ನಂತರ ಆರ್ಎಸ್ಎಸ್ ಚಡ್ಡಿ ಸುಡುವಂತ್ರಿ : ಪ್ರಲ್ಹಾದ್ ಜೋಶಿ