ETV Bharat / state

ಡಿಕೆ ಬ್ರದರ್ಸ್ ಸೇರಿ 41 ಕಾಂಗ್ರೆಸ್​ ನಾಯಕರ ವಿರುದ್ಧ ಮತ್ತೊಂದು ಎಫ್​ಐಆರ್! - ಡಿಕೆ ಶಿವಕುಮಾರ್ ಸೇರಿ ಕಾಂಗ್ರೆಸ್ ನಾಯಕರ ವಿರುದ್ಧ ಎಫ್​ಐಆರ್

FIR against congress leaders including DK brothers: ಮೇಕೆದಾಟು ಪಾದಯಾತ್ರೆಯಲ್ಲಿ ಕೋವಿಡ್ ನಿಯಮಾವಳಿ ಗಾಳಿಗೆ ತೂರಿದ ಆರೋಪದ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್​ನ 41 ನಾಯಕರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಕಾಂಗ್ರೆಸ್​ ನಾಯಕರ ವಿರುದ್ಧ ಎಫ್​ಐಆರ್
ಕಾಂಗ್ರೆಸ್​ ನಾಯಕರ ವಿರುದ್ಧ ಎಫ್​ಐಆರ್
author img

By

Published : Jan 11, 2022, 7:04 PM IST

Updated : Jan 11, 2022, 7:35 PM IST

ರಾಮನಗರ: ಕೋವಿಡ್ ನಿಯಮಾವಳಿ ಗಾಳಿಗೆ ತೂರಿ ಮೇಕೆದಾಟು ಪಾದಯಾತ್ರೆ ಕೈಗೊಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ಸೇರಿದಂತೆ 41 ಮಂದಿ‌ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.

ನಿನ್ನೆ ದೊಡ್ಡ ಆಲಹಳ್ಳಿ ಗ್ರಾಮದಿಂದ ಕೊರೊನಾ ನಿಯಮಾವಳಿ ಉಲ್ಲಂಘನೆ ‌ಮಾಡಿದ ಆರೋಪದ ಮೇಲೆ ಇಂದು ಕನಕಪುರ ತಾಲೂಕಿನ ಸಾತನೂರು ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಾಗಿದೆ. ಸೋಮವಾರ ಸಿದ್ದರಾಮಯ್ಯ ಇಲ್ಲದ ಕಾರಣ ಎಫ್​ಐಆರ್​ನಲ್ಲಿ ಅವರ ಹೆಸರನ್ನು ಕೈಬಿಡಲಾಗಿದೆ.

ಡಿಕೆಶಿ ನೇತೃತ್ವದಲ್ಲಿ ಮೇಕೆದಾಟುನಿಂದ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಗೊಂಡು ಕೊರೊನಾ ನಿಯಮ ಉಲ್ಲಂಘಿಸಿದೆ. ಈ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿಯಲ್ಲಿ‌ ದೂರು ದಾಖಲಾಗಿದೆ. ಈ ಮೊದಲು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರು ಪೊಲೀಸ್​​ ಠಾಣೆಯಲ್ಲೇ ಮೊದಲ ಎಫ್‌ಐಆರ್ ದಾಖಲಾಗಿತ್ತು.

ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣ:

ಡಿಕೆ ಶಿವಕುಮಾರ್, ಡಿಕೆ ಸುರೇಶ್, ಕೃಷ್ಣಬೈರೇಗೌಡ, ಹೆಚ್​.ಆಂಜನೇಯ, ನಾರಾಯಣಸ್ವಾಮಿ, ಮೊಟಮ್ಮ, ಪಿ.ಟಿ.ಪರಮೇಶ್ವರ್, ಧೃವನಾರಾಯಣ, ಆರ್ ನಾಗೇಂದ್ರ, ಪುಟ್ಟರಂಗಶೆಟ್ಟಿ, ಅಂಜಲಿ ನಿಂಬಾಳ್ಕರ್, ಲಕ್ಷ್ಮಿ ಹೆಬ್ಬಾಳ್ಕರ್, ಮಧು ಬಂಗಾರಪ್ಪ, ಐವಾನ್ ಡಿಸೋಜ್, ಶರತ್ ಬಚ್ಚೇಗೌಡ, ಪ್ರಿಯಾಕೃಷ್ಣ, ವಿಜಯ್ ಕುಲಕರ್ಣಿ, ಎಂಬಿ ಪಾಟೀಲ್, ಉಮಾಶ್ರೀ, ಈಶ್ವರ್ ಖಂಡ್ರೆ, ನಲಪಾಡ್ ಹ್ಯಾರಿಸ್, ಟಿಬಿ ಜಯಚಂದ್ರ, ಬಿಕೆ ಹರಿಪ್ರಸಾದ್, ಸತೀಶ್ ಜಾರಕಿಹೊಳಿ, ರಿಜ್ವಾನ್ ಅರ್ಷದ್ .

(ಇದನ್ನೂ ಓದಿ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ: ಡಿಕೆಶಿ, ಸಿದ್ದರಾಮಯ್ಯ ಸೇರಿ 31 ಮಂದಿ ವಿರುದ್ಧ ಎಫ್​ಐಆರ್​ ದಾಖಲು)

Last Updated : Jan 11, 2022, 7:35 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.