ರಾಮನಗರ: ಕೌಟುಂಬಿಕ ಕಲಹದಿಂದ ಬೇಸತ್ತು ಪತಿ-ಪತ್ನಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮಾಗಡಿ ಪಟ್ಟಣದ ತಿರುಮಲೆ ಭಜನೆ ಮನೆ ರಸ್ತೆಯಲ್ಲಿ ನಡೆದಿದೆ.
ಪಟ್ಟಣದ ತಿರುಮಲೆ ಭಜನೆ ಮನೆ ರಸ್ತೆಯ ಧೃವರಾಜು ಎಂಬುವವರ ಮನೆಯಲ್ಲಿ ವಾಸವಾಗಿದ್ದ ತುಮಕೂರು ಜಿಲ್ಲೆಯ ಲಿಂಗದೇವಪಾಳ್ಯದ ನಿವಾಸಿ ನರಸಿಂಹಮೂರ್ತಿ ನಾಯ್ಕ [40], ಪತ್ನಿ ಹೇಮ [35] ನೇಣಿಗೆ ಶರಣಾದವರು.
ಪ್ರತಿನಿತ್ಯ ಪತಿ ನರಸಿಂಹಮೂರ್ತಿ ಮದ್ಯಸೇವನೆ ಮಾಡಿಕೊಂಡು ಮನೆಗೆ ಬರುತ್ತಿದ್ದ. ಇದರಿಂದ ಗಂಡ-ಹೆಂಡತಿ ನಡುವೆ ಜಗಳ ಉಂಟಾಗುತ್ತಿತ್ತು ಎಂದು ಅಕ್ಕ-ಪಕ್ಕದ ಮನೆಯವರು ದೂರಿದ್ದಾರೆ. ಇದಲ್ಲದೆ ಹೇಮಳಿಗೆ ಮೊತ್ತೊಂದು ಮದುವೆಯಾಗಿತ್ತು ಎಂದು ಹೇಳಲಾಗ್ತಿದೆ.
ಇದರಿಂದ ಜಗಳ ವಿಕೋಪಕ್ಕೆ ತಿರುಗಿದೆ. ನಂತರ ಇಬ್ಬರೂ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ವಿಷಯ ತಿಳಿದ ಮಾಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಓದಿ: ಕ್ಯಾಷ್ ಡೆಪಾಸಿಟರ್ನಲ್ಲಿ ಹಣ ಜಮಾ ಮಾಡುವವರೇ ಇವನ ಟಾರ್ಗೆಟ್.. ಹಣ ಗಳಿಕೆಗೆ ಅಡ್ಡದಾರಿಗಿಳಿದ ಬಿಇ ಪದವೀಧರ..