ರಾಮನಗರ: ಹುಟ್ಟುಹಬ್ಬವನ್ನು ಬಹಳ ಅದ್ಧೂರಿಯಾಗಿ ಆಚರಿಸಿಕೊಳ್ಳುವುದು ಸಾಮಾನ್ಯ ವಿಚಾರ. ಆದ್ರೆ ಇಲ್ಲೋರ್ವರು ತಮ್ಮ ಮಗಳ ಹುಟ್ಟುಹಬ್ಬದ ಸಲುವಾಗಿ ಬಡವರಿಗೆ, ಇರುಳಿಗ ಜನಾಂಗದವರಿಗೆ ಸೋಪು ಹಾಗೂ ಮಾಸ್ಕ್ ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರಯುವುದರ ಜತೆಗೆ ಕೊರೊನಾ ಜಾಗೃತಿ ಮೂಡಿಸಿದ್ದಾರೆ.
ಸಂಶೋಧಕ ಎಸ್. ರುದ್ರೇಶ್ವರ ಹಾಗೂ ಶಿಕ್ಷಕಿ ಡಿ. ಆರ್. ನೀಲಾಂಬಿಕಾ ದಂಪತಿ ತಮ್ಮ ಪುತ್ರಿ ಆರ್. ಯಶಿಕಾ ಅವರ ಜನುಮ ದಿನದ ಅಂಗವಾಗಿ ತಾಲೂಕಿನ ಕೂಟಗಲ್ ಬಳಿಯ ಇರುಳಿಗರ ಕಾಲೋನಿಯಲ್ಲಿ ಉಚಿತವಾಗಿ ಮಾಸ್ಕ್ ಹಾಗೂ ಸೋಪ್ ವಿತರಣೆ ಮಾಡಿದ್ದಾರೆ.
ಜನರು ಧೃತಿಗೆಡದೆ, ಆತ್ಮಸ್ಥೈರ್ಯ ಕಳೆದುಕೊಳ್ಳದೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಿದರೆ ಕೋವಿಡ್ ಮಹಾಮಾರಿಯನ್ನು ನಿಯಂತ್ರಣಕ್ಕೆ ತರಬಹುದು. ಈ ದಂಪತಿ ಕೊರೊನಾ ಜಾಗೃತಿ ಮೂಡಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಗರ್ಭಿಣಿ ಶವ ಪತ್ತೆ: ವರದಕ್ಷಿಣೆಗಾಗಿ ಕೊಂದರೆಂದ ಪೋಷಕರು
ಈ ವೇಳೆ ಇರುಳಿಗ ಸಮುದಾಯದ ಮುಖಂಡ ಎಸ್. ರಾಜು ಮಾತನಾಡಿ, ಸಂಶೋಧಕ ಎಸ್. ರುದ್ರೇಶ್ವರ ಹಲವು ವರ್ಷಗಳಿಂದಲೂ ನಿರ್ಲಕ್ಷಿತ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ತಮ್ಮ ಮಗಳ ಜನ್ಮ ದಿನದ ಅಂಗವಾಗಿ ಇರುಳಿಗ ಸಮುದಾಯದ ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿ ಮಾಸ್ಕ್ ಹಾಗೂ ಸೋಪ್ ವಿತರಣೆ ಮಾಡಿರುವುದು ಶ್ಲಾಘನೀಯ ಎಂದರು.