ರಾಮನಗರ: ರಾಮನಗರದಿಂದ ಚಾಲನೆಗೊಳ್ಳಬೇಕಿದ್ದ ಐದನೇ ದಿನದ ಪಾದಯಾತ್ರೆಗೆ ಚಾಲನೆ ನೀಡುವುದೇ ಬಹುತೇಕ ಅನುಮಾನ ಎನ್ನಲಾಗುತ್ತಿದೆ.
ಸಿದ್ದರಾಮಯ್ಯ ಈಗಾಗಲೇ ಅನಾರೋಗ್ಯದ ನಿಮಿತ್ತ ಬುಧವಾರ ಮಧ್ಯಾಹ್ನವೇ ಬೆಂಗಳೂರು ಸೇರಿದ್ದಾರೆ. ಇದೆಲ್ಲದರ ನಡುವೆ, ಪಾದಯಾತ್ರೆಯಲ್ಲಿ ಭಾಗವಹಿಸಲು ಯಾವುದೇ ವಾಹನಗಳು ಜಿಲ್ಲೆಯೊಳಗೆ ಸುಳಿಯುವಂತಿಲ್ಲ. ನಗರದ ಐಜೂರು ವೃತ್ತದಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆಯಾಗಿದ್ದು, ಮೂರು ಸಾವಿರಕ್ಕೂ ಹೆಚ್ಚು ಪೊಲೀಸರು ರಾಮನಗರದಲ್ಲಿ ಬಂದಿಳಿದಿದ್ದಾರೆ.
ಆರ್‌ಸಿಎಸ್ ಕಲ್ಯಾಣ ಮಂಟಪದಲ್ಲಿ ಆರು ರಿಸರ್ವ್ ವ್ಯಾನ್ ನಿಲ್ಲಿಸಲಾಗಿದೆ. ಎಡಿಜಿಪಿ, ಐಜಿ, ಎಸ್ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ರಾತ್ರೋರಾತ್ರಿ ನಡೆದಿದೆ.
ಪಾದಯತ್ರೆ ನಡೆದರೆ ಏನಾಗಬಹುದು?:
ಒಂದು ವೇಳೆ ಸರ್ಕಾರದ ನಿಷೇಧದ ನಡುವೆಯೇ ಪಾದಯಾತ್ರೆ ಜರುಗಿದ್ರೆ ಡಿಕೆಶಿ, ಸಿದ್ದರಾಮಯ್ಯ ಅವರನ್ನು ಪೊಲೀಸರು ವಶಕ್ಕೆ ಪಡೆಯಬಹುದು ಎನ್ನಲಾಗಿದೆ. ಇಲ್ಲವೇ, ಪಾದಯಾತ್ರೆಯನ್ನು ನಾಳೆ ಬಿಡದಿಯಲ್ಲಿ ತಡೆದು, ಬಂಧಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.