ETV Bharat / state

ಬೊಂಬೆನಗರಿಯಲ್ಲಿ ಕಾಂಗ್ರೆಸ್​ನಿಂದ ಅಬ್ಬರದ ಪ್ರಚಾರ: ಮನೆ ಮನೆಗೆ ತೆರಳಿ ಮತಯಾಚಿಸಿದ ಗಂಗಾಧರ್​ - ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಟಾಂಗ್

ರಾಜ್ಯದಲ್ಲಿನ ಈ ಬಾರಿಯ ಚುನಾವಣೆ 5 ಗ್ಯಾರಂಟಿ ಯೋಜನೆ ಹಾಗೂ 40% ಕಮಿಷನ್​​ ನಡುವಣ ಸಮರವಾಗಿದೆ ಎಂದು ಕಾಂಗ್ರೆಸ್​ ಅಭ್ಯರ್ಥಿ ಗಂಗಾಧರ್ ಅವರು ತಿಳಿಸಿದ್ದಾರೆ.

ಕಾಂಗ್ರೆಸ್​ ಅಭ್ಯರ್ಥಿ ಗಂಗಾಧರ್
ಕಾಂಗ್ರೆಸ್​ ಅಭ್ಯರ್ಥಿ ಗಂಗಾಧರ್
author img

By

Published : May 1, 2023, 8:43 PM IST

ಕಾಂಗ್ರೆಸ್​ ಅಭ್ಯರ್ಥಿ ಗಂಗಾಧರ್

ರಾಮನಗರ : ಬೊಂಬೆನಗರಿಯಲ್ಲಿ ಕಾಂಗ್ರೆಸ್ ಪಕ್ಷದ ಅಬ್ಬರದ ಪ್ರಚಾರ ಮುಂದುವರೆದಿದೆ. ಮುಸ್ಲಿಂ ವಾರ್ಡ್​ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಂಗಾಧರ್ ಮನೆ ಮನೆಗೆ ಕಾಲ್ನಡಿಗೆಯಲ್ಲಿ ತೆರಳಿ ಮತಯಾಚನೆ ನಡೆಸಿದರು.

ಮುಸ್ಲಿಂ ಬಾಂಧವರ ಮತಬೇಟೆ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ: ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ತಕ್ಕ ಉತ್ತರ ನೀಡಬೇಕಾದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರು ಕೈ ಜೋಡಿಸುವಂತೆ ಕಾಂಗ್ರೆಸ್ ಅಭ್ಯರ್ಥಿ ಗಂಗಾಧರ್ ಮತಯಾಚನೆ ನಡೆಸಿದ್ದಾರೆ.

ನಗರದ ಯಾರಬ್ ನಗರದಲ್ಲಿ ಮನೆ ಮನೆ ಪ್ರಚಾರ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸ ತೊಡಗಿದ್ದು, ರಾಜ್ಯದ ಅಭಿವೃದ್ಧಿ ಆಗಬೇಕಾದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂಬುದು ಈಗಾಗಲೇ ಜನರಿಗೆ ಅರಿವಾಗಿದೆ. ಇದರಿಂದಲೇ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 140 ರಿಂದ 150 ಕ್ಕೂ ಹೆಚ್ಚು ಸ್ಥಾನ ಗಳಿಸಿ ಸ್ಪಷ್ಟ ಬಹುಮತ ಗಳಿಸಲಿದೆ. ಕಾಂಗ್ರೆಸ್ ದೀನ ದಲಿತರ ಜಾತ್ಯತೀತ ಪಕ್ಷವಾಗಿದ್ದು, ಇದರಲ್ಲಿ ಎಲ್ಲಾ ಜಾತಿಯವರಿಗೂ ಆದ್ಯತೆ ಇದೆ. ಈ ನಿಟ್ಟಿನಲ್ಲಿ ಮುಸ್ಲಿಂ ಬಾಂಧವರು ತಮ್ಮ ಕೈ ಹಿಡಿಯುವಂತೆ ಮನವಿ ಮಾಡಿಕೊಂಡರು.

ಐದು ಬಾರಿ ಶಾಸಕರಾಗಿ ಸಿ ಪಿ ಯೋಗೇಶ್ವರ್ ಅವರನ್ನ ನೋಡಿದ್ದಾರೆ. ಅವರು ಸೋತರೂ ಕೂಡ ಎಂಎಲ್​ಸಿ ಆಗಿ ಮುಂದುವರೆಯಲಿದ್ದಾರೆ. ಕಳೆದ ಚುನಾವಣೆಯಲ್ಲಿ‌ ಗೆದ್ದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಆಡಳಿತವನ್ನು ಕೂಡ ಜನತೆ ನೋಡಿದ್ದಾರೆ. ಜನರಿಗೆ ಬದಲಾವಣೆ ಬೇಕಾಗಿದೆ. ಹೊಸ ಮುಖಕ್ಕೆ ಜನರು ಮನ್ನಣೆ ಹಾಕುವ ಮುನ್ಸೂಚನೆ ಇದೆ. ಈ ಬಾರಿ ಗೆಲ್ಲುವ ವಿಶ್ವಾಸ ನನಗಿದೆ. ಈ ಬಾರಿ ನನಗೆ ಬೆಂಬಲಿಸುವಂತೆ ಕಾಂಗ್ರೆಸ್ ಅಭ್ಯರ್ಥಿ ಎಸ್ ಗಂಗಾಧರ್ ಮತದಾರರಲ್ಲಿ‌ ಮನವಿ ಮಾಡಿಕೊಂಡಿದ್ದಾರೆ.

ಬೂತ್ ಮಟ್ಟದಲ್ಲಿ ಸಂಘಟನೆ : ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿ ಯೋಜನೆಗಳು ಈ ಬಾರಿ ಚುನಾವಣೆಯಲ್ಲಿ ಹೆಚ್ಚು ಅನುಕೂಲವಾಗಲಿದೆ. ಇದಲ್ಲದೆ ಕ್ಷೇತ್ರದಲ್ಲಿ ಎರಡು ಪಕ್ಷದ ಆಡಳಿತ ನೋಡಿದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರಲು ಮುಂದಾಗಿದ್ದಾರೆ. ಈ ಚುನಾವಣೆ 5 ಗ್ಯಾರಂಟಿ ಯೋಜನೆ ಹಾಗೂ 40% ಕಮಿಷನ್ ನಡುವಣ ಸಮರವಾಗಿದೆ ಎಂದಿದ್ದಾರೆ ಕಾಂಗ್ರೆಸ್​ ಅಭ್ಯರ್ಥಿ.

ಕಾಂಗ್ರೆಸ್ ಅಭ್ಯರ್ಥಿಯನ್ನ ಮಾತನಾಡಿಸಿದ ಅಲ್ಪಸಂಖ್ಯಾತ ಮುಖಂಡ: ಯಾರಬ್ ನಗರದಲ್ಲಿ ಸ್ವತಃ ಕಾಂಗ್ರೆಸ್ ಅಭ್ಯರ್ಥಿ ಗಂಗಾಧರ್ ‌ಮನೆ ಮನೆ ಪ್ರಚಾರ ನಡೆಸಿ ಮತಯಾಚನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಮುಸ್ಲಿಂ ಮುಖಂಡರೊಬ್ಬರು ಗಂಗಾಧರ್ ಅವರನ್ನ ಮಾತನಾಡಿಸಲು ಮನೆಯ ಹೊರಗಡೆ ಬಂದು ನಿಂತಿದ್ದರು. ಪ್ರಚಾರದ ಭರಾಟೆಯಲ್ಲಿ ವಾರ್ಡ್​ನ ಪ್ರಮುಖ ಮುಖಂಡರನ್ನು ಮಾತನಾಡಿಸದೆ ಮುಂದೆ ಹೋಗಿದ್ದರು. ನಂತರ ಕೂಡಲೆ ಪ್ರಚಾರದಲ್ಲಿ ಮುಂದೆ ಹೋಗಿದ್ದ ಕಾಂಗ್ರೆಸ್ ಅಭ್ಯರ್ಥಿ ಗಂಗಾಧರ್ ಮತ್ತೆ ಈ ಮುಸ್ಲಿಂ ಮುಖಂಡರನ್ನ ಮಾತನಾಡಿಸಲು ಹಿಂದಕ್ಕೆ ಬಂದು ತಮ್ಮನ್ನ ಬೆಂಬಲಿಸುವಂತೆ ಮಾತಯಾಚನೆ ಮಾಡಿದರು.

ಇದನ್ನೂ ಓದಿ: ಉಚಿತ ಭರವಸೆ ಮೂಲಕ ಬಿಜೆಪಿ ರಾಜ್ಯದ ಜನರ ಕಿವಿಗೆ ಹೂ ಇಟ್ಟಿದೆ: ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.