ETV Bharat / state

ಚನ್ನಪಟ್ಟಣದಲ್ಲಿ ಪವಾಡ ಪುರುಷ... ಸಾಯಿಬಾಬಾ ಅವತಾರವೆಂದು ಮುಗಿಬಿದ್ದ ಭಕ್ತರು!

ಚನ್ನಪಟ್ಟಣದಲ್ಲಿ ಸ್ವಾಮೀಜಿಯೊಬ್ಬರು ಕಾಣಿಸಿಕೊಂಡಿದ್ದು, ಶಿರಿಡಿ ಸಾಯಿಬಾಬಾರ ಅವತಾರವೆಂದು ದರ್ಶನ ಪಡೆಯಲು ಭಕ್ತರು ಮುಗಿಬಿದ್ದಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಚಿಕ್ಕಮಳೂರಿನಲ್ಲಿ ನಡೆದಿದೆ.

KN_RMN_01a_SAI_BABA_VISUALS_7204219
ಚನ್ನಪಟ್ಟಣದಲ್ಲಿ ಪವಾಡ ಪುರುಷ, ಸಾಯಿಬಾಬಾ ಅವತಾರವೆಂದು ಮುಗಿಬಿದ್ದ ಭಕ್ತರು
author img

By

Published : Nov 28, 2019, 11:45 PM IST

ರಾಮನಗರ: ಚನ್ನಪಟ್ಟಣದಲ್ಲಿ ಸ್ವಾಮೀಜಿಯೊಬ್ಬರು ಕಾಣಿಸಿಕೊಂಡಿದ್ದು, ಶಿರಿಡಿ ಸಾಯಿಬಾಬಾರ ಅವತಾರವೆಂದು ದರ್ಶನ ಪಡೆಯಲು ಭಕ್ತರು ಮುಗಿಬಿದ್ದಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಚಿಕ್ಕಮಳೂರಿನಲ್ಲಿ ನಡೆದಿದೆ.

ಸಾಯಿಬಾಬಾ ಅವತಾರವೆಂದು ದರ್ಶನಕ್ಕೆ ಮುಗಿಬಿದ್ದ ಭಕ್ತರು

ಬರಿಗೈನಲ್ಲಿ ಭಕ್ತರಿಗೆ ವಿಭೂತಿ, ತಾಯತ, ಸಿಹಿ ತಿನಿಸು ನೀಡುತ್ತಿರುವ ಪ್ರೇಮ್ ಸಾಯಿಬಾಬಾ ಎಂಬ ಸ್ವಾಮೀಜಿಯೊಬ್ಬರು ದಿಢೀರ್ ಪ್ರತ್ಯಕ್ಷರಾಗಿದ್ದಾರೆ. ಚಿಕ್ಕಮಳೂರಿನ ಸ್ಮಶಾನದಲ್ಲಿ ಪುಟ್ಟಸ್ವಾಮಿಗೌಡ ಎಂಬುವವರ ಸಮಾಧಿ ಬಳಿ ಇದ್ದ ಪ್ರೇಮ್ ಸಾಯಿ, ಮೂರು ದಿನಗಳಿಂದ ಮಂಗಳವಾರಪೇಟೆಯ ಪ್ರಕಾಶ್ ಎಂಬುವವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಬೆಳಿಗ್ಗೆ ಹಾಗೂ ಸಾಯಂಕಾಲದ ವೇಳೆ ದರ್ಶನ ಹಾಗೂ ಭಜನೆ ಮಾಡುತ್ತಿರುವ ಇವರು, ಹಿಂದಿ, ಇಂಗ್ಲಿಷ್​​ ಹಾಗೂ ಸ್ವಲ್ಪ ಕನ್ನಡದಲ್ಲಿ ಮಾತನಾಡುತ್ತಾರೆ.

ಅಲ್ಲದೆ ಸಮಸ್ಯೆಗಳನ್ನು ಹೇಳಿಕೊಂಡು ಬರುವ ಭಕ್ತರಿಗೆ ಪ್ರಸಾದ ರೂಪದಲ್ಲಿ ವಿಭೂತಿ, ಕೆಲವರಿಗೆ ಸಾಯಿ ಬಾಬಾ ಪೋಟೋ, ತಾಯತ, ಸಿಹಿ ತಿನಿಸು ನೀಡುತ್ತಿದ್ದು, ಇವರ ದರ್ಶನ ಪಡೆಯಲು ಭಕ್ತರು ಮುಗಿಬಿದ್ದಿದ್ದಾರೆ.

Intro:Body:ರಾಮನಗರ : ಶಿರಡಿ ಬಾಬಾ, ಸತ್ಯಸಾಯಿ ಬಾಬಾರ ಅವತಾರವೆಂದು ಪವಾಡ ಪುರುಷರೊಬ್ಬರನ್ನ ನೋಡಲು ಭಕ್ತರು ಮುಗಿ ಬಿದ್ದಿದ್ದಾರೆ. ಬರಿಗೈನಲ್ಲಿ ಭಕ್ತರಿಗೆ ವಿಭೂತಿ, ತಾಯತ, ಸಿಹಿ ತಿನಿಸು ನೀಡುತ್ತಿರುವ ಪ್ರೇಮ್ ಸಾಯಿ ಬಾಬಾ ಎಂಬ ಪವಾಡ ಪುರುಷ ದಿಡೀರ್ ಪ್ರತ್ಯಕ್ಷರಾಗಿದ್ದಾರೆ.
ಚನ್ನಪಟ್ಟಣದ ಚಿಕ್ಕಮಳೂರಿನಲ್ಲಿ ಕಳೆದ ಒಂದು ವಾರದಿಂದ ಪ್ರೇಮ್ ಸಾಯಿಬಾಬಾನ ಪವಾಡಕ್ಕೆ ಭಕ್ತರು ಮರುಳಾಗಿದ್ದಾರೆ. ಚಿಕ್ಕಮಳೂರಿನ ಸ್ಮಶಾನದಲ್ಲಿ ಪುಟ್ಟಸ್ವಾಮಿಗೌಡ ಎಂಬುವವರ ಸಮಾಧಿ ಬಳಿ ಇದ್ದ ಪ್ರೇಮ್ ಸಾಯಿ ಕಳೆದ ಮೂರು ದಿನಗಳಿಂದ ಮಂಗಳವಾರಪೇಟೆಯ ಪ್ರಕಾಶ್ ಎಂಬುವವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ.
ಬೆಳಿಗ್ಗೆ ಹಾಗೂ ಸಾಯಂಕಾಲದ ವೇಳೆ ದರ್ಶನ ಹಾಗೂ ಭಜನೆ ಮಾಡುತ್ತಿರುವ ಪವಾಡ ಪುರುಷ ಹಿಂದಿ, ಇಂಗ್ಲೀಷ್ ಹಾಗೂ ಸ್ವಲ್ಪ ಕನ್ನಡದಲ್ಲಿ ಮಾತನಾಡುತ್ತಾರೆ, ಅಲ್ಲದೆ ಬಾಬ ಬಳಿಗೆ ಸಮಸ್ಯೆಗಳನ್ನು ಹೇಳಿಕೊಂಡು ಬರುವ ಭಕ್ತರಿಗೆ ಪ್ರಸಾದ ರೂಪದಲ್ಲಿ ವಿಭೂತಿ ನೀಡ್ತಾರೆ, ಕೆಲವರಿಗೆ ಸಾಯಿಬಾಬಾ ಪೋಟೋ, ತಾಯತ, ಸಿಹಿ ತಿನಿಸು ನೀಡುತ್ತಿರುವ ಪವಾಡ ಪುರುಷ ಭಕ್ತರಿಂದ ಯಾವುದೇ ಕಾಣಿಕೆ ಪಡೆಯದೇ ದರ್ಶನ ನೀಡುವ ಜೊತೆಗೆ ಸಮಸ್ಯೆಗಳಿಗೆ ಪರಿಹಾರ ಹೇಳುತ್ತಿದ್ದಾರೆ ಬಾಬಾ ದರ್ಶನ ಪಡೆಯಲು ಭಕ್ತರು ಮುಗಿಬಿದ್ದಿದ್ದಾರೆ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.