ರಾಮನಗರ: ಇದು ಶುದ್ಧು ಸುಳ್ಳು, ಅವರನ್ನು ಭೇಟಿಯಾಗುವ ಅವಶ್ಯಕತೆ ನನಗೆ ಇಲ್ಲ. ಸ್ನೇಹಿತರು, ಆದರೆ ನಾನು ಭೇಟಿ ಆಗಿಲ್ಲ. ಭೇಟಿ ಆಗಬೇಕು ಅಂದರೆ ಆಗ್ತೀನಿ, ಇವರನ್ನ ಕೇಳಿ ಭೇಟಿ ಆಗಬೇಕಾ ಎಂದು ಸಚಿವ ಅಶ್ವತ್ಥ ನಾರಾಯಣ ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್ ಭೇಟಿ ವಿಚಾರಕ್ಕೆ ಹಾಗೂ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಸಚಿವ ಡಾ.ಅಶ್ವತ್ಥ ನಾರಾಯಣ್ ತಿರುಗೇಟು ನೀಡಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಅವರು, ಸ್ವಾಮಿ ಟಾರ್ಗೆಟ್ ಅಲ್ಲ, ಅದೊಂದು ಜೈಲುಹಕ್ಕಿ ಈಗ ಬೇಲ್ನಲ್ಲಿ ಆಚೆ ಇದೆ. ಅವರ ಕರ್ಮಕಾಂಡಕ್ಕೆ ಪರ್ಮನೆಂಟ್ ಜಾಗ ತಿಹಾರ್ ಜೈಲು. ನಮಗೆ ಗೌರವ ಹೆಚ್ಚಿಸುವ ರೀತಿ ಮೊದಲು ಕರ್ನಾಟಕದಿಂದ ತಿಹಾರ್ ಜೈಲಿಗೆ ಹೋಗಿದ್ದು ಡಿ.ಕೆ. ಶಿವಕುಮಾರ್. ಇದಲ್ಲದೇ ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಡಿಕೆ ಶಿವಕುಮಾರ್. ಸಿಕ್ಕಿದ್ದೆಲ್ಲ ಲೂಟಿ ಹೊಡೆಯೋದು, ಭ್ರಷ್ಟಾಚಾರ ಅಂದರೆ ಕಾಂಗ್ರೆಸ್ ಪಕ್ಷದ ಸಂಸ್ಕೃತಿ ಅವರು ಎಂದರು.
ಸಿಎಂ ಖರ್ಚು ಖಾಲಿ ಇಲ್ಲ: ನಮ್ಮ ಪಕ್ಷದಲ್ಲಿ ನನ್ನ ವಿರುದ್ಧ ಇರೋರು ಯಾರೂ ಇಲ್ಲ. ಸಿಎಂ ಸ್ಥಾನಕ್ಕೆ ಅರ್ಜಿ ಹಾಕಿಲ್ಲ, ಈಗ ಖಾಲಿಯೂ ಇಲ್ಲ. ಪಕ್ಷ ನಿಶ್ಚಯ ಮಾಡಲಿದೆ ಸಿಎಂ ಯಾರು ಅಂತಾ ಎಂದು ಇದೇ ವೇಳೆ ಸಚಿವ ಅಶ್ವತ್ಥ ನಾರಾಯಣ ಡಿ.ಕೆ.ಶಿವಕುಮಾರ್ ಗೆ ತಿರುಗೇಟು ನೀಡಿದರು.
ಮಾನಮರ್ಯಾದೆ ಇದ್ದರೆ ದಾಖಲೆ ಬಿಡುಗಡೆ ಮಾಡಿ: ಕಾಂಗ್ರೆಸ್ ಪಕ್ಷ ಆರೋಪ ಮಾಡುವಾಗ ದಾಖಲೆ ಇಟ್ಟುಕೊಂಡು ಆರೋಪ ಮಾಡಲಿ. ಸುಮ್ಮನೇ ಬರೀ ಬಾಯಿ ಮಾತಲ್ಲಿ ಆರೋಪಿಸಿ ಪ್ರಯೋಜನ ಇಲ್ಲ. ದಾಖಲೆ ಇಲ್ಲದೇ ಒಬ್ಬ ವ್ಯಕ್ತಿಯ ತೇಜೋವಧೆ ಮಾಡುವುದು ಕಾಂಗ್ರೆಸ್ ರೀತಿಯ ಪಕ್ಷಕ್ಕೆ ಮರ್ಯಾದೆ ಅಲ್ಲ.
ಇದನ್ನೂ ಓದಿ: 'ಸಿಇಒ ಕೂಡ ತಂಡದ ಆಯ್ಕೆಯಲ್ಲಿ ಭಾಗಿ'.. ಮುಂಬೈ ವಿರುದ್ಧ ಗೆದ್ದ ಬಳಿಕ ಶ್ರೇಯಸ್ ಹೇಳಿದ್ರು ಈ ಮಾತು!