ರಾಮನಗರ : ಬೆಳ್ಳಂಬೆಳ್ಳಗ್ಗೆ ಏಕಾಏಕಿ ವ್ಯಕ್ತಿಯೊಬ್ಬನ ಮೇಲೆ ಕರಡಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ರಾಮನಗರದ ಬಿಳಗುಂಬ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹುನುಮಂತಯ್ಯ ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯಾಗಿದ್ದಾರೆ. ಬೆಳಗ್ಗೆ ಎಂದಿನಂತೆ ಕೊಟ್ಟಿಗೆ ಕಸ ಸುರಿಯಲು ಮನೆಯ ಹಿಂಭಾಗ ಹೋದ ಸಂದರ್ಭದಲ್ಲಿ ಕಾಡಿನಿಂದ ನಾಡಿಗೆ ಬಂದಿದ್ದ ಈ ಕರಡಿ ಏಕಾಏಕಿ ಇವರ ಮೇಲೆ ಬಿದ್ದಿದೆ.
ಈ ವೇಳೆ, ಕರಡಿ ಹನುಮಂತಯ್ಯನ ಮೇಲೆ ತೀವ್ರ ಸ್ವರೂಪದಲ್ಲಿ ಗಾಯಗೊಳಿಸಿದ್ದು, ಕೂಡಲೇ ಅವರನ್ನ ರಾಮನಗರ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಕರಡಿ ಹಿಡಿದು ಕಾಡಿಗೆ ಕಳುಹಿಸುವುದಾಗಿ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಇದನ್ನೂ ಓದಿ : ದೀಪಾವಳಿ ಹಬ್ಬದಂದು ಬಾಲಕಿ ಬಲಿ ಪಡೆದ ಚಿರತೆ: ಕಳೆದ 8 ದಿನಗಳಲ್ಲಿ 5 ಮಂದಿ ಸಾವು