ರಾಮನಗರ: ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧ ಮೂವರು ಆರೋಪಿಗಳನ್ನ ಮಾಗಡಿ ಪೊಲೀಸರು ಕೋರ್ಟ್ಗೆ ಹಾಜರು ಪಡಿಸಿದರು.
ಇಂದು ಪೊಲೀಸ್ ಕಸ್ಟಡಿ ಅಂತ್ಯ ಹಿನ್ನೆಲೆ ಮಾಗಡಿಯ 1ನೇ ಜೆಎಂಎಫ್ಸಿ ಕೋರ್ಟ್ಗೆ ಹಾಜರುಪಡಿಸಲಾಯಿತು. ನಂತರ ಆರೋಪಿಗಳನ್ನು 15ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. 1ನೇ ಹೆಚ್ಚುವರಿ ನ್ಯಾಯಾಧೀಶರಾದ ಎಂ. ಧನಲಕ್ಷ್ಮಿ ಆದೇಶ ಹೊರಡಿಸಿದರು.
ಮೃತ್ಯುಂಜಯ ಸ್ವಾಮೀಜಿ ಮತ್ತು ವಕೀಲ ಮಹದೇವ್ ಅವರನ್ನು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ರವಾನೆ ಮಾಡಲಾಯಿತು. ಹಾಗೆ ನೀಲಾಂಬಿಕೆಯನ್ನ ಪರಪ್ಪನ ಅಗ್ರಹಾರಕ್ಕೆ ಕಳುಹಿಸುವಂತೆ ಆದೇಶ ಹೊರಡಿಸಲಾಯಿತು. ನ.15ಕ್ಕೆ ಪ್ರಕರಣದ ವಿಚಾರಣೆಯನ್ನ ಮುಂದೂಡಲಾಯಿತು.
ಘಟನೆಯ ಹಿನ್ನೆಲೆ: ಈ ಮೂವರು ಆರೋಪಿಗಳು ಬಸವಲಿಂಗ ಸಾಮೀಜಿ ಸಾವಿಗೆ ಕಾರಣರಾಗಿದ್ದರು. ಕಣ್ಣೂರು ಶ್ರೀ ನಾನೇ ಹನಿಟ್ರ್ಯಾಪ್ ಮಾಡಿಸಿದ್ದೆ ಎಂದು ಒಪ್ಪಿಕೊಂಡಿದ್ದು, ನೀಲಾಂಬಿಕೆಯನ್ನ ಮುಂದಿಟ್ಟುಕೊಂಡು ಹನಿಟ್ರ್ಯಾಪ್ ಮಾಡಲಾಗಿತ್ತು. ಸ್ವಾಮೀಜಿ ಮರ್ಯಾದೆ ತೆಗೆಯಲು ವಿಡಿಯೋ ಮಾಡಿಸಿದ್ದೆ. 3 ತಿಂಗಳ ಹಿಂದೆಯೇ ಸ್ವಾಮೀಜಿ ವಿಡಿಯೋ ರೆಡಿಯಾಗಿತ್ತು ಎಂದು ಕಣ್ಣೂರು ಶ್ರೀ(ಮೃತ್ಯುಂಜಯ ಸ್ವಾಮೀಜಿ) ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಬಂಡೆಮಠ ಶ್ರೀ ಹನಿಟ್ರ್ಯಾಪ್ಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದನ್ನೂ ಓದಿ: ಕಂಚುಗಲ್ ಬಂಡೆಮಠ ಶ್ರೀ ಆತ್ಮಹತ್ಯೆ ಪ್ರಕರಣ: ಕುದೂರು ಠಾಣೆಯಲ್ಲಿ ದೂರು