ETV Bharat / state

ಸಾಲುಮರಗಳ ಸರದಾರ: ಅರೇಹಳ್ಳಿ ಗ್ರಾಮದಲ್ಲೊಬ್ಬ ಅಪರೂಪದ ಪರಿಸರ ಪ್ರೇಮಿ

author img

By

Published : Jun 5, 2021, 7:15 AM IST

Updated : Jun 5, 2021, 8:08 AM IST

ಇವರ ಹೆಸರು ಲಿಂಗಣ್ಣ. ಸಾಲುಮರದ ಲಿಂಗಣ್ಣ ಎಂದೇ ಹೆಸರುವಾಸಿ. ಪರಿಸರ ಸಂರಕ್ಷಣೆ, ಸಸಿ‌ ಬೆಳೆಸುವುದೆಂದರೆ ಇವರಿಗೆ ಅಚ್ಚುಮೆಚ್ಚಿನ ಕಾಯಕ. ತಮ್ಮ ಸ್ವಂತ ಖರ್ಚಿನಲ್ಲೇ ನೂರಾರು ಗಿಡಗಳನ್ನ ನೆಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ.

environmental lover linganna
ಪರಿಸರ ಪ್ರೇಮಿ ಸಾಲುಮರದ ಲಿಂಗಣ್ಣ

ರಾಮನಗರ: ಸಾಲುಮರದ ತಿಮ್ಮಕ್ಕನ ಮಾದರಿಯಲ್ಲಿಯೇ ಇಲ್ಲೊಬ್ಬರು ಸಾಲು ಮರಗಳನ್ನು ಕಳೆದ 20 ವರ್ಷಗಳಿಂದ ಸಂರಕ್ಷಿಸಿ ಪೋಷಿಸುತ್ತಿದ್ದಾರೆ. ಹೆಂಡತಿ ತಾಳಿ ಅಡಮಾನವಿಟ್ಟು ಸಸಿಗಳಿಗೆ ಕಿ.ಮೀ.ಗಟ್ಟಲೆ ನಡೆದುಕೊಂಡೇ ನೀರು ಹಾಯಿಸಿ ಗಿಡಗಳ ಸಂರಕ್ಷಣೆ ಮಾಡಿ ಪರಿಸರ ಪ್ರೇಮ ಮೆರೆದಿದ್ದಾರೆ.

ಇವರ ಹೆಸರು ಲಿಂಗಣ್ಣ. ಸಾಲು ಮರದ ಲಿಂಗಣ್ಣ ಎಂದೇ ಹೆಸರುವಾಸಿ. ತುಂಡು ಭೂಮಿ ನೀಡುವಂತೆ ಕಳೆದ 5 ವರ್ಷಗಳಿಂದ ಸರ್ಕಾರವನ್ನು ಗೊಗರೆಯುತ್ತಿರುವ ವೃಕ್ಷ ಸಂರಕ್ಷಕ ಲಿಂಗಣ್ಣ ಅವರ ಬೇಡಿಕೆ ಕೇವಲ ಕಚೇರಿಗಳ ಪತ್ರಗಳಲ್ಲಿ ಉಳಿದಿದೆ. ರಾಜಭವನದಿಂದ ಹಿಡಿದು ತಹಶೀಲ್ದಾರ್ ಕಚೇರಿವರೆಗೂ ಕೇವಲ ಪತ್ರ ಬರೆಯುವಲ್ಲಿಯೇ ನಿರತರವಾಗಿರುವ ಇವರಿಗೆ ಸರ್ಕಾರ ಜೀವನ ನಿರ್ವಹಣೆಗೆ ಸಹಾಯ ಹಸ್ತ ಚಾಚುವಲ್ಲಿ ವಿಫಲವಾಗಿದೆ.

ರಾಮನಗರದ ಕೂಟಗಲ್ ಹೋಬಳಿಯ ಅರೇಹಳ್ಳಿ ಗ್ರಾಮದ ಲಿಂಗಣ್ಣ ಅವರು ರಸ್ತೆಯ ಎರಡೂ ಬದಿಗಳಲ್ಲಿ ಸಾಲಾಗಿ ಮರಗಳನ್ನು ನೆಟ್ಟು ಕಳೆದ 20 ವರ್ಷಗಳಿಂದ ಪೋಷಿಸುತ್ತಿದ್ದಾರೆ. ಸುಮಾರು 950 ಮರಗಳನ್ನು ಪೋಷಿಸಿದ್ದು, ಕಣ್ವ ಲೇಔಟ್‌ನಲ್ಲಿಯೂ ಮರಗಳನ್ನು ಸಲುಹುತ್ತಿದ್ದಾರೆ. ಟ್ಯಾಂಕರ್ ನೀರಿನಲ್ಲಿ ಮರಗಳನ್ನು ಸಾಕಿದ್ದ ಇವರ ಸಾಧನೆಗೆ ಅನೇಕ ಪ್ರಶಸ್ತಿಗಳು ಸಹ ಹುಡುಕಿಕೊಂಡು ಬಂದಿವೆ.

ಆದರೆ ಜೀವನ ನಿರ್ವಹಣೆಗೆ 5 ಎಕರೆ ಭೂಮಿ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಸಂಬಂಧಿಸಿದ ಇಲಾಖೆಗಳ ಕಿವಿ ಕಿವುಡಾಗಿದೆ. ಮರಗಳನ್ನು ಸಲಹುತ್ತಿರುವ ಈತ ಇದೀಗ ಕೂಲಿ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಕಳೆದ 18 ವರ್ಷಗಳ ಹಿಂದೆ ಕೂನಮುದ್ದನಹಳ್ಳಿ ಹೊರಭಾಗದಲ್ಲಿರುವ ಕೋಡಿಬಸವೇಶ್ವರ ದೇವಾಲಯದ ಆವರಣದಲ್ಲಿನ ಗುಂಡುತೋಪು ಮರಗಳಿಲ್ಲದೆ ಭಣಗುಡುತ್ತಿತ್ತು. ಇದನ್ನು ಕಂಡ ನಿಂಗಣ್ಣ ಸುಮಾರು 300 ಗಿಡಗಳನ್ನು ಅರಣ್ಯ ಇಲಾಖೆಯ ನರ್ಸರಿಯಿಂದ ತಂದು ನೆಟ್ಟು ಪೋಷಿಸಿದರು.

arehalli-villager-linganna-protect-forest-tree
ಲಿಂಗಣ್ಣ

ಇವುಗಳಲ್ಲಿ ಕೆಲವು ಗಿಡಗಳು ಒಣಗಿ ಹೋದವು. ಈಗ ಸುಮಾರು 250 ಗಿಡಗಳು ಚೆನ್ನಾಗಿ ಬೆಳೆದು ಇಡೀ ಗುಂಡುತೋಪು ಹಸಿರಿನಿಂದ ಕಂಗೊಳಿಸುತ್ತಿದೆ. ಬೇಸಿಗೆಯ ರಣಬಿಸಿಲಿನಲ್ಲೂ ತನ್ನ ಮನೆ ಕೆಲಸ ಬಿಟ್ಟು, ಹೆಂಡತಿ ಮಕ್ಕಳ ಜತೆಯಲ್ಲಿ ಇಲ್ಲಿನ ಗಿಡಗಳಿಗೆ ಹತ್ತಿರದ ಕೆರೆ ಹಾಗೂ ಬಾವಿಯಿಂದ ನೀರು ತಂದು ತನ್ನ ಮಕ್ಕಳಂತೆ ಬೆಳೆಸಿದ್ದಾರೆ. ಗುಂಡು ತೋಪಿನ ಮರಗಳ ಸಂರಕ್ಷಣೆ ಹಾಗೂ ಬೆಳವಣಿಗೆ ಗಮನಿಸಿದ ಅರಣ್ಯ ಇಲಾಖೆಯವರು ಬಿಳಗುಂಬ ಗ್ರಾಮದಿಂದ ಕೂನಮುದ್ದನಹಳ್ಳಿ ಗ್ರಾಮದ ನಡುವೆ ಸುಮಾರು 3 ಕಿ.ಮೀ.ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಸುಮಾರು 680ಕ್ಕೂ ಹೆಚ್ಚಿನ ಗಿಡಗಳನ್ನು ನೆಟ್ಟು ಅವುಗಳ ಪೋಷಣೆ ಹೊಣೆ ನನಗೆ ವಹಿಸಿದರು ಎನ್ನುತ್ತಾರೆ ನಿಂಗಣ್ಣ.

ಹೆಂಡತಿ ತಾಳಿ‌ ಅಡಮಾನ ಇಟ್ಟ ಪರಿಸರ ಪ್ರೇಮಿ:
ಪರಿಸರ ಸಂರಕ್ಷಣೆ, ಸಸಿ‌ ಬೆಳೆಸುವುದೆಂದ್ರೆ ಇವರಿಗೆ ಅಚ್ಚುಮೆಚ್ಚಿನ ಕಾಯಕ. ತಮ್ಮ ಸ್ವಂತ ಖರ್ಚಿನಲ್ಲೇ ನೂರಾರು ಗಿಡಗಳನ್ನ ನೆಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. ಒಮ್ಮೆ ಗಿಡಗಳಿಗೆ ನೀರು ತರಲು ಹಣವಿಲ್ಲದ ವೇಳೆ ತನ್ನ ಹೆಂಡತಿ ತಾಳಿಯನ್ನ ಅಡವಿಟ್ಟು ಹಣ ತಂದು ಗಿಡಗಳಿಗೆ ನೀರನ್ನ ಹಾಯಿಸಿದ್ದರಂತೆ.

ಒಟ್ಟಾರೆ ಸಾಲುಮರದ ಲಿಂಗಣ್ಣ ಎಲೆ ಮರೆಯ ಕಾಯಿಯಂತೆ ಪರಿಸರ ಪ್ರೇಮ ಮೆರೆಯುತ್ತಿದ್ದಾರೆ. ಇವರ ಈ ಕಾಯಕ ಗುರುತಿಸಿ ಆದಷ್ಟು ಬೇಗ ಸರ್ಕಾರ ಅವರ ಮನವಿಗೆ ಸ್ಪಂದಿಸಲಿ ಎಂಬುದೇ ನಮ್ಮ ಆಶಯ.

ಓದಿ: ಲಾಕ್‌ಡೌನ್​ನಿಂದ ಬೊಕ್ಕಸ ಖಾಲಿ : ಆದಾಯ ಕೊರತೆ ಸರಿದೂಗಿಸಲು ಪರ್ಯಾಯ ಮಾರ್ಗೋಪಾಯದತ್ತ ಸರ್ಕಾರ ಚಿತ್ತ!

Last Updated : Jun 5, 2021, 8:08 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.