ETV Bharat / state

ರಾಮನಗರ : ಮಣ್ಣಿನ ಬಳೆಗಳನ್ನು ಅಳವಡಿಸಿರುವ ಪುರಾತನ ಕಾಲದ ಸಿಹಿ ನೀರಿನ ಬಾವಿ ಪತ್ತೆ - ಮಾಗಡಿ ತಾಲ್ಲೂಕಿನ ಸರ್ವಧರ್ಮ ಸಮನ್ವಯ ನೆಲೆ ಕಲ್ಯಾದ ಬೆಟ್ಟದ ತಪ್ಪಲಿನಲ್ಲಿ ಸಿಹಿ ನೀರಿನ ಬಾವಿ ಪತ್ತೆ

ಕಲ್ಯಾದ ಚಾರಿತ್ರಿಕ ಅಂಶಗಳು ಸಿಂದೂಕೊಳ್ಳದ ನಾಗರಿಕತೆಯ ಕುರುಹುಗಳನ್ನು ಪ್ರತಿಬಿಂಬಿಸುತ್ತಿದ್ದು, ದೊರತಿರುವ ಮಣ್ಣಿನ ಬಳೆಗಳಿಂದ ನಿರ್ಮಿಸಲಾಗಿರುವ ಸಿಹಿ ನೀರಿನ ಬಾವಿಯ ಬಗ್ಗೆ ತಲಸ್ಪರ್ಶಿ ಅಧ್ಯಯನ ನಡೆಸಲಾಗುವುದು ಎಂದು‌ ಸಂಶೋಧಕರು ತಿಳಿಸಿದ್ದಾರೆ..

ancient fresh water well found
ಪುರಾತನ ಕಾಲದ ಸಿಹಿ ನೀರಿನ ಬಾವಿ ಪತ್ತೆ
author img

By

Published : Apr 12, 2022, 4:36 PM IST

ರಾಮನಗರ : ಮಾಗಡಿ ತಾಲೂಕಿನ ಸರ್ವಧರ್ಮ ಸಮನ್ವಯ ನೆಲೆ ಕಲ್ಯಾದ ಬೆಟ್ಟದ ತಪ್ಪಲಿನ ರೈತನ ಜಮೀನಿನಲ್ಲಿ ಭೂಮಿ ಸಮಗೊಳಿಸುತ್ತಿದ್ದಾಗ ಪುರಾತನ ಕಾಲದ ಮಣ್ಣಿನ ಬಳೆಗಳನ್ನು ಅಳವಡಿಸಿರುವ ಸಿಹಿ ನೀರಿನ ಬಾವಿ ಪತ್ತೆಯಾಗಿದೆ. ಕಲ್ಯಾದ ಬೆಟ್ಟದ ತಪ್ಪಲಿನಲ್ಲಿ ವಿಜಯನಗರ ಅರಸು ಬುಕ್ಕರಾಯನ ಧರ್ಮಸಮನ್ವಯ ಶಿಲಾ ಶಾಸನ ಸುರಕ್ಷಣೆಯ ಕಾಮಗಾರಿ ವೀಕ್ಷಿಸಿದರು. ‘ಬೌದ್ಧ, ಜೈನ, ವೈಷ್ಣವ, ಶೈವರ ನೆಲೆಯಾಗಿದ್ದ ಕಲ್ಯಾದ ಸಾಂಸ್ಕೃತಿಕ, ಚಾರಿತ್ರಿಕ ಶಿಲಾಶಾಸನ, ವೀರಗಲ್ಲು, ಕೆರೆಕಟ್ಟೆ ಕಲ್ಯಾಣಿಗಳನ್ನು ರಕ್ಷಿಸುವ ಕೆಲಸ ಮಾಡಲಾಗುತ್ತಿದೆ.

ಪತ್ತೆಯಾಗಿರುವ ಸಿಹಿನೀರಿನ ಬಾವಿಯಲ್ಲಿ ಇಂದಿಗೂ ನೀರಿದ್ದು, ಬಾವಿಯಲ್ಲಿ ಮಣ್ಣಿನ ಬಳೆಗಳನ್ನು ಜೋಡಿಸಿ ಕಟ್ಟಿರುವ ಬಗ್ಗೆ ಇತಿಹಾಸ ಸಂಶೋಧಕರು ಸಂಶೋಧನೆ ಮಾಡುವ ಮೂಲಕ ಬಾವಿಯ ಮಹತ್ವವನ್ನು ಕಂಡು ಹಿಡಿಯಬೇಕಿದೆ. ಸಿಂದೂಕೊಳ್ಳದ ನಾಗರಿಕತೆಯ ಕಾಲದಲ್ಲಿ ಸುಟ್ಟ ಇಟ್ಟಿಗೆಗಳನ್ನು ಬಳಸಿ, ಸಿಹಿನೀರಿನ ಬಾವಿಗಳನ್ನು ನಿರ್ಮಿಸಲಾಗುತ್ತಿತ್ತು.

ಕಲ್ಯಾದ ಚಾರಿತ್ರಿಕ ಅಂಶಗಳು ಸಿಂದೂಕೊಳ್ಳದ ನಾಗರಿಕತೆಯ ಕುರುಹುಗಳನ್ನು ಪ್ರತಿಬಿಂಬಿಸುತ್ತಿದ್ದು, ದೊರತಿರುವ ಮಣ್ಣಿನ ಬಳೆಗಳಿಂದ ನಿರ್ಮಿಸಲಾಗಿರುವ ಸಿಹಿ ನೀರಿನ ಬಾವಿಯ ಬಗ್ಗೆ ತಲಸ್ಪರ್ಶಿ ಅಧ್ಯಯನ ನಡೆಸಲಾಗುವುದು ಎಂದು‌ ಸಂಶೋಧಕರು ತಿಳಿಸಿದ್ದಾರೆ.

ಇದನ್ನೂ ಓದಿ: ಮುದ್ದೇಬಿಹಾಳ: ಮೈನವಿರೇಳಿಸಿದ ಜೋಡೆತ್ತುಗಳ ದಿಂಡಿನ ರೇಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.