ETV Bharat / state

ಬಂಜರು ಭೂಮಿಯಲ್ಲಿ ಬಂಗಾರದ ಬೆಳೆ... ಮಾದರಿಯಾದ ಯುವ ರೈತ!

ರಾಮನಗರ ಜಾಲಮಂಗಲ ರಸ್ತೆಯ ಪುಟ್ಟ ಹಳ್ಳಿ ನಿಜಯಪ್ಪನ ದೊಡ್ಡಿಯ ಯುವಕ ಸುರೇಂದ್ರ ಅವರು ಕುರುಚಲು ಗಿಡಗಳಿಂದ ಕೂಡಿದ್ದ ಖಾಲಿ ಜಮೀನನ್ನು ಕೇವಲ ನಾಲ್ಕು ವರ್ಷದಲ್ಲಿ ಯಾವುದೇ ರಾಸಾಯನಿಕ ಬಳಸದೇ ಸಾವಯವ ಕೃಷಿ ಮೂಲಕ ಹಲವು ವಿಧದ ಬೆಳೆಗಳನ್ನು ಬೆಳೆದು ಮಾದರಿ ರೈತರಾಗಿದ್ದಾರೆ.

author img

By

Published : May 17, 2019, 4:25 AM IST

ಮಾದರಿಯಾದ ಯುವ ರೈತ ಸುರೇಂದ್ರ

ರಾಮನಗರ: ವ್ಯವಸಾಯ ಎಂದರೆ ಮನೆ ಮಂದಿಯಲ್ಲಾ ಹಿಂದೆ ಸರಿಯುವ ಈ ಕಾಲಘಟ್ಟದಲ್ಲಿ ಯುವ ರೈತ ಸುರೇಂದ್ರ ಯಾವುದೇ ರಾಸಾಯನಿಕ ಬಳಸದೆ ಸಾವಯವ ಕೃಷಿ ಮೂಲಕ ಸಾಧನೆ ಮಾಡಿ ಮಾದರಿಯಾಗಿ ನಿಂತಿದ್ದಾರೆ. ಅವರ ಯಶೋಗಾಥೆ ಇಲ್ಲಿದೆ ನೋಡಿ...

ರಾಮನಗರ ಜಾಲಮಂಗಲ ರಸ್ತೆಯ ಪುಟ್ಟ ಹಳ್ಳಿ ನಿಜಯಪ್ಪನ ದೊಡ್ಡಿಯ ಯುವಕ ಸುರೇಂದ್ರ ಅವರು ಕುರುಚಲು ಗಿಡಗಳಿಂದ ಕೂಡಿದ್ದ ಖಾಲಿ ಜಮೀನನ್ನು ಕೇವಲ ನಾಲ್ಕು ವರ್ಷದಲ್ಲಿ ಯಾವುದೇ ರಾಸಾಯನಿಕ ಬಳಸದೇ ಸಾವಯವ ಕೃಷಿ ಮೂಲಕ ಹಲವು ವಿಧದ ಬೆಳೆಗಳನ್ನು ಬೆಳೆದು ಮಾದರಿ ರೈತರಾಗಿದ್ದಾರೆ.

ಜಮೀನಿನ ಸುತ್ತಲು ತೇಗ, ಸಿಲ್ವರ್, ಮಹಾಘನಿ, ಬೇವು ಸೇರಿದಂತೆ ಹಲವು ಮರಗಳ ಬೇಲಿ ನಿರ್ಮಾಣ ಮಾಡಿ, ಒಳಗೆ ಶ್ರೀಗಂಧ, ಮಾವು, ಸೀಬೆ, ಕಿತ್ತಳೆ, ನೇರಳೆ, ನಿಂಬೆ ಸೇರಿದಂತೆ ವಿವಿಧ ಔಷಧಿಯ ಸಸ್ಯಗಳು, ಗೋಬರ್ ಗ್ಯಾಸ್ ಘಟಕ, ಎರೆಹುಳು ಗೊಬ್ಬರ ಘಟಕ, ಜೀವಾಮೃತ ಘಟಕ, ಮಳೆ ನೀರು ಇಂಗುಗುಂಡಿ ಹೀಗೆ ಎಲ್ಲವನ್ನು ಕೇವಲ ಮೂರು ಎಕರೆ ಜಾಗ ಸೃಷ್ಟಿಸಿದ್ದಾರೆ.

ಮಾದರಿಯಾದ ಯುವ ರೈತ ಸುರೇಂದ್ರ

ಪರಿಸರ ಮತ್ತು ಕೃಷಿ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಕೊಂಡೋಯ್ಯುವ ವಿನೂತನ ಪ್ರಯತ್ನವನ್ನು ಮಾಡುತ್ತಿದ್ದು, ಇದಕ್ಕೆ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಸಹ ಸಹಕಾರ ನೀಡಿವೆ. ಇದರಿಂದ ತಮ್ಮ ಮೂರು ಎಕರೆ ತೋಟದಲ್ಲಿ ಯಾವುದೇ ರಾಸಾಯನಿಕಗಳನ್ನು ಬಳಸದೆ ನೈಸರ್ಗಿಕ ಕೃಷಿಯನ್ನು ಮಾಡಿ ಯಶಸ್ವಿಯಾಗಿದ್ದೇನೆ ಎಂದು ಸುರೇಂದ್ರ ತಿಳಿಸುತ್ತಾರೆ.

ನೈಸರ್ಗಿಕ ಕೃಷಿ ಪದ್ಧತಿ ಅಳವಡಿಕೆ:

ಹತ್ತು ವರ್ಷಗಳ ಹಿಂದೆ ಕೇರಳದ ಕಾಸರಗೋಡಿನಲ್ಲಿ ಗೋಡಂಬಿ ಬೆಳೆಗೆ ಅಂಟಿದ್ದ ರೋಗವನ್ನು ನಾಶ ಪಡಿಸಿ ಸಿಂಪಡಿಸಿದ ’ಎಂಡೋ ಸಲ್ಫಾನ್’ ಪರಿಣಾಮ ನನ್ನ ಜೀವನದ ದಿಕ್ಕನ್ನೆ ಬದಲಾಯಿಸಿತು. ಎಂಡೋ ಸಲ್ಫಾನ್ ನಂತರದ ದುಷ್ಪರಿಣಾಮಗಳನ್ನು ಕಣ್ಣಾರೆ ಕಂಡ ನಾನು ಒಂದು ರೀತಿಯಲ್ಲಿ ಭಯ ಭೀತನಾಗಿ ನನ್ನ ಊರಿಗೆ ಹಿಂತಿರುಗಿ ಬಂಜರು ಬಿದ್ದ ಭೂಮಿಯಲ್ಲಿ ಕೃಷಿಯನ್ನು ಪ್ರಾರಂಭಿಸಿದೆ. ಪ್ರಾರಂಭದ ನಾಲ್ಕೈದು ವರ್ಷಗಳಲ್ಲಿ ಕಷ್ಟಪಟ್ಟು ನೈಸರ್ಗಿಕ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡೆ ಎಂದರು.

ಬೀಜಗಳ ಸಂಗ್ರಹ:

ಬೀಜಗಳ ಮೇಲೆ ಹಲವು ದೇಶಗಳು ಈಗಾಗಲೆ ಪೇಟೆಂಟ್ ಪಡೆದುಕೊಂಡು ತಮ್ಮ ಹಕ್ಕು ಸಾಧಿಸಿವೆ. ಇದು ಹೀಗೆಯೆ ಮುಂದುವರೆದರೆ ಭೂಮಿ ಇದ್ದರೂ ಬೆಳೆ ತೆಗೆಯಲು ಅನ್ಯರನ್ನು ಅವಲಂಭಿಸಬೇಕಾಗುತ್ತದೆ ಎಂಬುದನ್ನು ಅರಿತ ನಾನು ದೇಶಿ ಬೀಜ ಸಂರಕ್ಷಣೆಯ ಬಗ್ಗೆ ಆಳವಾಗಿ ಚಿಂತನೆ ನಡೆಸಿ ಅದರಲ್ಲಿ ಇದೀಗ ಯಶಸ್ಸು ಸಾಧಿಸಿದ್ದೇನೆ. ಇದರಿಂದಾಗಿ ನನ್ನ ಮುಂದಿನ ಹತ್ತು ವರ್ಷಗಳಿಗಾಗುವಷ್ಟು ಬೀಜಗಳನ್ನು ಸಂಗ್ರಹ ಮಾಡಿ ಇಟ್ಟು ಕೊಂಡಿದ್ದೇನೆ ಎಂದರು.

ದೀರ್ಘ ಕಾಲದ ಯೋಜನೆ:

ನಾವು ಯಾವುದೇ ಕೆಲಸವನ್ನು ಮಾಡಬೇಕಾದರು ಮೊದಲು ದೀರ್ಘ ಕಾಲದ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಮಳೆ ಆಶ್ರಯದಲ್ಲಿ ಬದುಕು ಸಾಗಿಸುವುದನ್ನು ನಿಲ್ಲಿಸುವವರೆಗೆ ರೈತ ಸ್ವಾವಲಂಭಿಯಾಗಲು ಸಾಧ್ಯವಿಲ್ಲ. ಇದನ್ನರಿತು ಮುಂದಿನ ಮೂರು ತಲೆಮಾರಿನ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ನಾನು ಮುಂದಡಿ ಇಟ್ಟಿದ್ದೇನೆ ಎಂದು ತಮ್ಮ ಯೋಜನೆಯನ್ನು ತಿಳಿಸಿದರು.

ರಾಮನಗರ : ವ್ಯವಸಾಯ ಅಂದ್ರೆ ಮನೆ ಮಂದಿಎಲ್ಲಾ ಸಾಯಾ ಅಂತಾ ಮೂಗು ಮುರಿಯುತ್ತಿದ್ದವರಿಗೆ ಯುವ ರೈತ ಸುರೇಂದ್ರ ಯಾವುದೇ ರಾಸಾಯನಿಕ ಬಳಸದೆ ಸಾವಯವ ಕೃಷಿ ಮೂಲಕ ಸಾಧನೆ ಮಾಡಿ ಮಾದರಿಯಾಗಿ ನಿಂತಿದ್ದಾರೆ ಅವರ ಯಶೋಗಾಥೆ ಇಲ್ಲಿದೆ. ರಾಮನಗರ ಜಾಲಮಂಗಲ ರಸ್ತೆಯ ಪುಟ್ಟ ಹಳ್ಳಿ ನಿಜಯಪ್ಪನ ದೊಡ್ಡಿಯ ಯುವಕ ಸುರೇಂದ್ರ ಅವರು ಕುರುಚಲು ಗಿಡಗಳಿಂದ ಕೂಡಿದ್ದ ಖಾಲಿ ಜಮೀನನ್ನು ಕೇವಲ ನಾಲ್ಕು ವರ್ಷದಲ್ಲಿ ಯಾವುದೇ ರಾಸಾಯನಿಕ ಬಳಸದೇ ಸಾವಯವ ಕೃಷಿ ಮೂಲಕ ಹಲವು ವಿಧದ ಬೆಳೆಗಳನ್ನು ಬೆಳೆದು ಮಾದರಿ ರೈತರಾಗಿದ್ದಾರೆ. ಜಮೀನಿನ ಸುತ್ತಲು ತೇಗ, ಸಿಲ್ವರ್, ಮಹಾಘನಿ, ಬೇವು ಸೇರಿದಂತೆ ಹಲವು ಮರಗಳ ಬೇಲಿ ನಿರ್ಮಾಣ, ಒಳಗೆ ಶ್ರೀಗಂಧ, ಮಾವು, ಸೀಬೆ, ಕಿತ್ತಳೆ, ನೇರಳೆ, ನಿಂಬೆ ಸೇರಿದಂತೆ ವಿವಿಧ ಔಷಧಿಯ ಸಸ್ಯಗಳು ಗೋಬರ್ ಗ್ಯಾಸ್ ಘಟಕ, ಎರಹುಳು ಗೊಬ್ಬರ ಘಟಕ, ಜೀವಾಮೃತ ಘಟಕ, ಮಳೆ ನೀರು ಇಂಗುಗುಂಡಿ ಇದೆಲ್ಲ ಕಂಡುಬಂದಿದ್ದು ಕೇವಲ ಮೂರು ಎಕರೆ ಜಾಗದಲ್ಲಿ ಬೆಳೆದು ತೋರಿಸಿದ್ದಾರೆ. ಪರಿಸರ ಮತ್ತು ಕೃಷಿ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಕೊಂಡೋಯ್ಯುವ ವಿನೂತನ ಪ್ರಯತ್ನವನ್ನು ಮಾಡುತ್ತಿದ್ದು, ಇದಕ್ಕೆ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಸಹ ಸಹಕಾರ ನೀಡಿವೆ ಇದರಿಂದ ತಮ್ಮ ಮೂರು ಎಕರೆ ತೋಟದಲ್ಲಿ ಯಾವುದೇ ರಾಸಾಯನಿಕಗಳನ್ನು ಬಳಸದೆ ನೈಸರ್ಗಿಕ ಕೃಷಿಯನ್ನು ಮಾಡಿ ಯಶಸ್ವಿಯಾಗಿದ್ದೇನೆ ಎಂದು ಸುರೇಂದ್ರ ತಿಳಿಸಿದರು. ಹತ್ತು ವರ್ಷಗಳ ಹಿಂದೆ ಕೇರಳದ ಕಾಸರಗೋಡಿನಲ್ಲಿ ಗೋಡಂಬಿ ಬೆಳೆಗೆ ಅಂಟಿದ್ದ ರೋಗವನ್ನು ನಾಶ ಪಡಿಸಿ ಸಿಂಪಡಿಸಿದ ’ಎಂಡೋ ಸಲ್ಫಾನ್’ ಪರಿಣಾಮ ನನ್ನ ಜೀವನದ ದಿಕ್ಕನ್ನೆ ಬದಲಾಯಿಸಿತು. ಎಂಡೋ ಸಲ್ಫಾನ್ ನಂತರದ ದುಷ್ಪರಿಣಾಮಗಳನ್ನು ಕಣ್ಣಾರೆ ಕಂಡ ನಾನು ಒಂದು ರೀತಿಯಲ್ಲಿ ಭಯ ಭೀತನಾಗಿ ನನ್ನ ಊರಿಗೆ ಹಿಂತಿರುಗಿ ಬಂಜರು ಬಿದ್ದ ಭೂಮಿಯಲ್ಲಿ ಕೃಷಿಯನ್ನು ಪ್ರಾರಂಭಿಸಿದೆ. ಪ್ರಾರಂಭದ ನಾಲ್ಕೈದು ವರ್ಷಗಳಲ್ಲಿ ಕಷ್ಟಪಟ್ಟು ನೈಸರ್ಗಿಕ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡೆ. ಬೀಜಗಳ ಮೇಲೆ ಹಲವು ದೇಶಗಳು ಈಗಾಗಲೆ ಪೇಟೆಂಟ್ ಪಡೆದುಕೊಂಡು ತಮ್ಮ ಹಕ್ಕು ಸಾಧಿಸಿವೆ. ಇದು ಹೀಗೆಯೆ ಮುಂದುವರೆದರೆ ಭೂಮಿ ಇದ್ದರೂ ಬೆಳೆ ತೆಗೆಯಲು ಅನ್ಯರನ್ನು ಅವಲಂಬಿಸಬೇಕಾಗುತ್ತದೆ ಎಂಬುದನ್ನು ಅರಿತ ನಾನು ದೇಶಿ ಬೀಜ ಸಂಕರಕ್ಷಣೆ’ಯ ಬಗ್ಗೆ ಆಳವಾಗಿ ಚಿಂತನೆ ನಡೆಸಿ ಅದರಲ್ಲಿ ಇದೀಗ ಯಶಸ್ಸು ಸಾಧಿಸಿದ್ದೇನೆ. ಇದರಿಂದಾಗಿ ನನ್ನ ಮುಂದಿನ ಹತ್ತು ವರ್ಷಗಳಿಗಾಗುವಷ್ಟು ಬೀಜಗಳನ್ನು ಸಂಗ್ರಹ ಮಾಡಿ ಇಟ್ಟು ಕೊಂಡಿದ್ದೇನೆ ಎಂದರು.  ನಾವು ಯಾವುದೆ ಕೆಲಸವನ್ನು ಮಾಡಬೇಕಾದರು ಮೊದಲು ಧೀರ್ಘ ಕಾಲದ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಮಳೆ ಆಶ್ರಯದಲ್ಲಿ ಬದುಕು ಸಾಗಿಸುವುದನ್ನು ನಿಲ್ಲಿಸುವವರೆಗೆ ರೈತ ಸ್ವಾವಲಂಬಿಯಾಗಲು ಸಾಧ್ಯವಿಲ್ಲ. ಇದನ್ನರಿತು ಮುಂದಿನ ಮೂರು ತಲೆಮಾರಿನ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡು ನಾನು ಮುಂದಡಿ ಇಟ್ಟಿದ್ದೇನೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.