ರಾಮನಗರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯ ಏರಿಕೆ ಮುಂದುವರೆದಿದ್ದು, ಇಂದು ಒಂದೇ ದಿನ 98 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಚನ್ನಪಟ್ಟಣ 23, ಕನಕಪುರ 8, ಮಾಗಡಿ 28 ಮತ್ತು ರಾಮನಗರ 29 ಪ್ರಕರಣ ಸೇರಿ ಒಟ್ಟು 98 ಪಾಸಿಟಿವ್ ಕೇಸ್ಗಳು ದೃಢಪಟ್ಟಿವೆ. ಸೋಂಕಿತರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಯ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ತಿಳಿಸಿದ್ದಾರೆ.
ಇದುವರೆಗೆ ಜಿಲ್ಲೆಯಲ್ಲಿ 998 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಚನ್ನಪಟ್ಟಣ 215, ಕನಕಪುರ 190, ಮಾಗಡಿ 250 ಮತ್ತು ರಾಮನಗರ 343 ಕೇಸ್ಗಳಿವೆ ಸೇರಿವೆ. ಇಂದು ಒಟ್ಟು ಎಂಟು ಸೋಂಕಿತರು ಗುಣಮುಖರಾಗಿದ್ದು, ಈ ಪೈಕಿ ಮಾಗಡಿ 3 ಮತ್ತು ರಾಮನಗರ 5 ಜನರಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 519 ಜನ ಗುಣಮುಖರಾಗಿದ್ದಾರೆ.
ಒಟ್ಟು 463 ಸಕ್ರಿಯ ಪ್ರಕರಣಗಳಿದ್ದು, ಚನ್ನಪಟ್ಟಣ 1, ಕನಕಪುರ 2, ಮಾಗಡಿ 9 ಜನ ಹಾಗೂ ರಾಮನಗರ ತಾಲೂಕಿನಲ್ಲಿ 4 ಜನ ಮೃತಪಟ್ಟಿದ್ದಾರೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 16 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.