ರಾಮನಗರ: ಜಿಲ್ಲೆಯಲ್ಲಿ ಇಂದು 79 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲಾ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ತಿಳಿಸಿದ್ದಾರೆ.
ಚನ್ನಪಟ್ಟಣ 20, ಕನಕಪುರ 28, ಮಾಗಡಿ 12 ಮತ್ತು ರಾಮನಗರ 19 ಪ್ರಕರಣಗಳು ಸೇರಿ ಒಟ್ಟು 79 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ ಜಿಲ್ಲೆಯಲ್ಲಿ 6,266 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಚನ್ನಪಟ್ಟಣ 1,508, ಕನಕಪುರ 1,369, ಮಾಗಡಿ 983 ಮತ್ತು ರಾಮನಗರ 2,406 ಸೋಂಕಿತರು ಪತ್ತೆಯಾಗಿದ್ದಾರೆ.
ಸಾವು: ಚನ್ನಪಟ್ಟಣ ತಾಲೂಕಿನಲ್ಲಿ 14, ಕನಕಪುರ ತಾಲೂಕಿನಲ್ಲಿ 13, ಮಾಗಡಿ ತಾಲೂಕಿನಲ್ಲಿ 16 ಹಾಗೂ ರಾಮನಗರ ತಾಲೂಕಿನಲ್ಲಿ 16 ಜನ ಸಾವನ್ನಪ್ಪಿದ್ದಾರೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 59 ಮಂದಿ ನಿಧನರಾಗಿದ್ದಾರೆ.
ಗುಣಮುಖ: ಚನ್ನಪಟ್ಟಣ ತಾಲೂಕಿನಲ್ಲಿ 23, ಕನಕಪುರ ತಾಲುಕಿನಲ್ಲಿ 22, ಮಾಗಡಿ ತಾಲೂಕಿನಲ್ಲಿ 14 ಹಾಗೂ ರಾಮನಗರ ತಾಲೂಕಿನಲ್ಲಿ 42 ಜನ ಸೇರಿ ಒಟ್ಟಾರೆ 101 ಜನರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 5,504 ಜನರು ಗುಣಮುಖರಾಗಿದ್ದಾರೆ. ಈ ಪೈಕಿ ಚನ್ನಪಟ್ಟಣ 1,342, ಕನಕಪುರ 1,172, ಮಾಗಡಿ 846 ಮತ್ತು ರಾಮನಗರ 2,144 ಸೋಂಕಿತರು ಸೇರಿದ್ದಾರೆ.
ಸಕ್ರಿಯ ಪ್ರಕರಣ: ಜಿಲ್ಲೆಯಲ್ಲಿ ದಾಖಲಾಗಿರುವ 6,266 ಪ್ರಕರಣಗಳ ಪೈಕಿ 5,504 ಜನರು ಗುಣಮುಖರಾಗಿದ್ದಾರೆ, ಇನ್ನೂ 703 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಒಟ್ಟು 703 ಸಕ್ರಿಯ ಪ್ರಕರಣಗಳ ಪೈಕಿ ಚನ್ನಪಟ್ಟಣ 152, ಕನಕಪುರ 184, ಮಾಗಡಿ 121 ಮತ್ತು ರಾಮನಗರ 246 ಪ್ರಕರಣಗಳು ಸೇರಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.