ರಾಮನಗರ: ಜಿಲ್ಲೆಯಲ್ಲಿ ಇಂದು 36 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ148 ಕ್ಕೆ ಏರಿಕೆಯಾಗಿದೆ.
ಮಾಗಡಿ ತಾಲ್ಲೂಕಿನಲ್ಲಿ 11ಪ್ರಕರಣಗಳು ದೃಢಪಟ್ಟಿದ್ದರೆ, ರಾಮನಗರ ತಾಲ್ಲೂಕಿನಲ್ಲಿ 5 ಪ್ರಕರಣಗಳು, ಚನ್ನಪಟ್ಟಣ ತಾಲ್ಲೂಕಿನಲ್ಲಿ 3 ಪ್ರಕರಣಗಳು ಹಾಗೂ ಕನಕಪುರ ತಾಲೂಕಿನಲ್ಲಿ 17 ಪ್ರಕರಣಗಳು ದೃಢಪಟ್ಟಿವೆ.
ಸೋಂಕಿತರೆಲ್ಲರನ್ನು ಚಿಕಿತ್ಸೆಗಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.