ರಾಮನಗರ : ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಲೇ ಇದೆ. ಇಂದು ಎರಡು ಪ್ರಕರಣ ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಒಟ್ಟು ಸಕ್ರೀಯ ಪ್ರಕರಣಗಳ ಸಂಖ್ಯೆ 6ಕ್ಕೇರಿದೆ.
ಜಿಲ್ಲೆಯ ಮಾಗಡಿ ಮತ್ತು ಕನಕಪುರದಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ. ಕನಕಪುರ ಹಳೆ ಸೇಂಟ್ ಮೈಕೆಲ್ ಶಾಲೆ ಬಳಿಯಲ್ಲಿ 17 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದೆ. ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಕನಕಪುರ ಬೂದಿಕೆರೆ ರಸ್ತೆ ಮತ್ತು ಸೇಂಟ್ ಮೈಕೆಲ್ ಶಾಲೆ ಬಳಿಯ ರಸ್ತೆಯನ್ನು ಸೀಲ್ಡೌನ್ ಮಾಡಲಾಗಿದೆ. ಕನಕಪುರ ಟೌನ್ನ ಬೂದಿಕೇರಿಯ ನಿರ್ಮಲ ಫ್ಯಾಷನ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಈ ಯುವಕನನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಆಸ್ಪತ್ರೆಗೆ ಕರೆ ತಂದಿದ್ದಾರೆ.
ಮಾಗಡಿ ಹೊಸಪಾಳ್ಯದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಈತ ಮುಂಬೈನಿಂದ ಬಂದಿದ್ದ ಎನ್ನಲಾಗಿದೆ. ಗ್ರಾಮಕ್ಕೆ ಬರುವ ಮುನ್ನವೇ ಈತನನ್ನು ಕ್ವಾರಂಟೈನ್ ಮಾಡಲಾಗಿತ್ತು.