ETV Bharat / state

ರಾಯಚೂರು: ಅಂಗಡಿ ಮುಂದೆ ನಿಂತಿದ್ದ ಯುವಕನಿಗೆ ಚಾಕು ಇರಿತ - ಯುವಕನಿಗೆ ಚಾಕು ಇರಿತ

ಅಂಗಡಿ ಮುಂದೆ ನಿಂತಿದ್ದ ಯುವಕನಿಗೆ ಚಾಕು ಇರಿದ ಘಟನೆ ರಾಯಚೂರು ಜನರಲ್ಲಿ ಭೀತಿ ಉಂಟು ಮಾಡಿದೆ.

ಯುವಕನಿಗೆ ಚಾಕು ಇರಿತ
ಯುವಕನಿಗೆ ಚಾಕು ಇರಿತ
author img

By

Published : Aug 26, 2022, 7:09 PM IST

ರಾಯಚೂರು: ಸಿಂಧನೂರು ಪಟ್ಟಣದ ಪ್ರವಾಸಿ ಮಂದಿರದ ಮುಖ್ಯರಸ್ತೆಯಲ್ಲಿ ಯುವಕನಿಗೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ. ನಗರದ ವಾರ್ಡ್ ನಂಬರ್ 25 ರ ಜನತಾ ಕಾಲೋನಿಯ ಹೈದರ್​​ ಹಸನ್ (19) ಗಾಯಗೊಂಡಿದ್ದಾನೆ. ಪ್ರವಾಸಿ ಮಂದಿರದ ಎದುರಿಗೆ ಬೈಕ್ ಸರ್ವಿಸ್ ಮಾಡಿಸಲು ಹೋದ ಈತನಿಗೆ​ ಅಲ್ಲೇ ಇದ್ದ ಅಪರಿಚಿತ ಯುವಕ ಏಕಾಏಕಿ ಧಾವಿಸಿ ಬಂದು ಬೆನ್ನಿಗೆ ಇರಿದಿದ್ದಾನೆ ಎಂದು ಹೇಳಲಾಗುತ್ತಿದೆ. ಗಾಯಾಳುವಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಬೈಕ್ ಮೇಲೆ ಹೊರಟಿದ್ದ ವ್ಯಕ್ತಿಯ ರುಂಡ ಕಡಿದು ಕೊಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.