ETV Bharat / state

ಸುದೀಪ್​ ಕಾರ್ಯಕ್ರಮದಲ್ಲಿಅನುಚಿತ ವರ್ತನೆ.. ಯುವಕನಿಗೆ ಕಪಾಳ ಮೋಕ್ಷ ಮಾಡಿದ ಮಹಿಳಾ PSI - ರಾಯಚೂರಿನಲ್ಲಿ ಸುದೀಪ್ ಫಂಕ್ಷನ್

ನಟ ಸುದೀಪ್ ಕಾರ್ಯಕ್ರಮದಲ್ಲಿ ಲೇಡಿ ಪಿಎಸ್ಐ ಜೊತೆ ಅನುಚಿತ ವರ್ತನೆ ತೋರಿದ್ದ ಯುವಕನನ್ನು ಪೊಲೀಸರು ಚೇಸ್ ಮಾಡಿ ಹಿಡಿದು ಎಲ್ಲರ ಮುಂದೆನೇ ಥಳಿಸಿರುವ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನಲ್ಲಿ ನಡೆದಿದೆ.

Young man misbehaviour with Lady PSI at Raichur, Young man misbehavior with Lady PSI in Sudeep function, Sudeep function in Raichur, Raichur news, ರಾಯಚೂರಿನಲ್ಲಿ ಲೇಡಿ ಪಿಎಸ್ಐ ಜೊತೆ ಯುವಕನ ಅನುಚಿತ ವರ್ತನೆ, ಸುದೀಪ್ ಸಮಾರಂಭದಲ್ಲಿ ಲೇಡಿ ಪಿಎಸ್ಐ ಜೊತೆ ಯುವಕ ಅನುಚಿತ ವರ್ತನೆ, ರಾಯಚೂರಿನಲ್ಲಿ ಸುದೀಪ್ ಫಂಕ್ಷನ್, ರಾಯಚೂರು ಸುದ್ದಿ,
ಸುದೀಪ್​ ಕಾರ್ಯಕ್ರಮದಲ್ಲಿ ಲೇಡಿ ಪಿಎಸ್​ಐ ಜೊತೆ ಅನುಚಿತ ವರ್ತನೆ
author img

By

Published : Apr 27, 2022, 1:17 PM IST

Updated : Apr 27, 2022, 2:00 PM IST

ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಕುರಕುಂದಾ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ನಟ ಸುದೀಪ್ ಆಗಮಿಸಿದ್ದರು. ಈ ವೇಳೆ, ಲೇಡಿ ಪಿಎಸ್​ಐ ಜೊತೆ ಯುವಕನೊಬ್ಬ ಅನುಚಿತವಾಗಿ ವರ್ತಿಸಿರುವ ಘಟನೆ ಕಂಡು ಬಂದಿದ್ದು, ಯುವಕನನ್ನು ಪೊಲೀಸರು ಹಿಡಿದು ಎಲ್ಲರ ಮುಂದೆ ಥಳಿಸಿ ಪೊಲೀಸ್​ ಠಾಣೆಗೆ ಕರೆದೊಯ್ದಿದ್ದಾರೆ.

ಸುದೀಪ್​ ಕಾರ್ಯಕ್ರಮದಲ್ಲಿ ಲೇಡಿ ಪಿಎಸ್​ಐ ಜೊತೆ ಅನುಚಿತ ವರ್ತನೆ

ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ನಟ ಸುದೀಪ್ ಹಾಜರಾದ ಹಿನ್ನೆಲೆ ಹೆಚ್ಚಿನ ಭದ್ರತೆಗಾಗಿ ಸಿರವಾರದ ಕುರಕುಂದಾ ಗ್ರಾಮದಲ್ಲಿ ಪೊಲೀಸ್​ ಪಡೆಯನ್ನು ನಿಯೋಜಿಸಲಾಗಿತ್ತು. ಈ ವೇಳೆ ಕಾರ್ಯ ನಿರತರಾಗಿದ್ದ ಪಿಎಸ್ಐ ಗೀತಾಂಜಲಿ ಸೇರಿದಂತೆ ಕೆಲ ಪೊಲೀಸರ ಜೊತೆ ಯುವಕನೊಬ್ಬ ಅನುಚಿತವಾಗಿ ವರ್ತಿಸಿದ್ದಾನೆ. ಅಷ್ಟೇ ಅಲ್ಲ ಯುವಕ ಪೊಲೀಸರ ಲಾಠಿಗೆ ಕೈ ಹಾಕಿದ್ದ ಎನ್ನಲಾಗುತ್ತಿದೆ.

ಓದಿ: ಚಿಕ್ಕೋಡಿ: ಭಿಕ್ಷುಕಿಯೊಂದಿಗೆ ಅಸಭ್ಯ ವರ್ತನೆ, ಶಿಕ್ಷಕನಿಗೆ ಧರ್ಮದೇಟು!

ಅನುಚಿತ ವರ್ತನೆ ಬಳಿಕ ಯುವಕ ಪರಾರಿಯಾಗಲು ಯತ್ನಿಸಿದ್ದಾನೆ. ಯುವಕನ ವರ್ತನೆಯಿಂದ ಬೇಸರಗೊಂಡ ಪಿಎಸ್ಐ ಆತನನ್ನು ಚೇಸ್​ ಮಾಡಿ ಹಿಡಿದಿದ್ದಾರೆ. ಬಳಿಕ ಎಲ್ಲರೆದುರೇ ಪಿಎಸ್​ಐ ಗೀತಾಂಜಲಿ ಯುವಕನಿಗೆ ಬೂಟು​ಗಾಲಿಂದ ಒದ್ದು, ಕಪಾಳ ಮೋಕ್ಷ ಮಾಡಿದ್ದಾರೆ. ಬಳಿಕ ಆ ಯುವಕನ್ನು ಪೊಲೀಸರು ಠಾಣೆಗೆ ಕರೆದೊಯ್ದರು.

Last Updated : Apr 27, 2022, 2:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.