ರಾಯಚೂರು: ಮುಂದಿನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳಲು ಚರ್ಚೆ ನಡೆದಿದ್ದು, ಇನ್ನು ಮಾತುಕತೆ ಆಗಿಲ್ಲ ಎಂದು ರಾಯಚೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರಗಳ ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ನಾಯಕರೊಂದಿಗೆ ಚರ್ಚೆ ನಡೆದಿದೆ. ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದರು.
ಯಡಿಯೂರಪ್ಪ ಶಾಸಕರ ಖರೀದಿಯ ಸಂಬಂಧ ನಡೆಸಲಾದ ಕುದುರೆ ವ್ಯಾಪಾರದ ಆಡಿಯೋ ತನಿಖೆ ಎಸ್ಐಟಿಗೆ ವಹಿಸಿದ್ದು, ಬಿಜೆಪಿ ಅವರು ತಗಾದೆ ಎತ್ತಿದ್ದಾರೆ. ಅವರು ತಪ್ಪು ಮಾಡಿಲ್ಲವೇ, ಮಾಡದಿದ್ದರೆ ಭಯಬೇಕೆ? ಎಸ್ಐಟಿ ರಾಜ್ಯ ಸರ್ಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂಬ ಆರೋಪವಿದ್ದರೆ ಕೇಂದ್ರದ ಅಧೀನದಲ್ಲಿರುವ ಸಿಬಿಐನ ಮೋದಿ ದುರುಪಯೋಗ ಪಡೆಸಿಕೊಳ್ಳುತ್ತಿದ್ದಾರಾ ಎಂದು ಮರು ಪ್ರಶ್ನೆ ಹಾಕಿದರು.
ತನಿಖೆ ನಡೆಸುವ ಪೊಲೀಸರ ಮೇಲೆ ನಂಬಿಕೆಯಿರಬೇಕು. ಸರ್ಕಾರಗಳು ಬದಲಾಗುತ್ತಿದ್ದರೂ ಅಧಿಕಾರಿಗಳು ಬದಲಾಗುವುದಿಲ್ಲ. ಬಿಜೆಪಿಗೆ ಭಯವಿದೆಯಾ? ತನಿಖೆಯನ್ನ ಎಸ್ಐಟಿಗೆ ವಹಿಸದೇ ಯಡಿಯೂರಪ್ಪ ಅಥವಾ ಅಮಿತ್ ಶಾಗೆ ವಹಿಸಬೇಕಾ ಎಂದು ಪ್ರಶ್ನಿಸಿದರು.
ಎಲ್ಲದಕ್ಕೂ ಸಿದ್ದರಾಮಯ್ಯನವರನ್ನು ದೂರುತ್ತಿರುವ ಬಿಜೆಪಿ ಅವರಿಗೆ ನನ್ನ ಬಗ್ಗೆ ಭಯವಿದೆ. ಉಮೇಶ್ ಜಾಧವ್ ಅವರು ಬಿಜೆಪಿ ಸೇರುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಅವರಿಗೆ ಪಕ್ಷದಲ್ಲಿ ಉಳಿಯಲು ಇಷ್ಟವಿಲ್ಲದಿದ್ದರೆ ಹೊರ ನಡೆಯಬೇಕು. ಅವರು ಪಕ್ಷದಲ್ಲಿ ಉಳಿಯಲು ನನಗೆ ಎರಡು ಪತ್ರ ನೀಡಿದ್ದಾರೆ. ನಾನು ಕಾಂಗ್ರೆಸ್ನಲ್ಲಿ ಇದ್ದೇನೆ ಎಂದು ಹೇಳುತ್ತಾರೆ.
ಅತೃಪ್ತ ಶಾಸಕರು ಅಸಮಾಧಾನವಿದ್ದರೆ ಪಕ್ಷದ ಶಿಸ್ತಿಗೆ ಒಳಪಟ್ಟಿರಬೇಕು. ಅತೃಪ್ತ ಶಾಸಕರ ನಡೆಯ ಕುರಿತು ಪಕ್ಷದ ವಿಪ್ ಉಲ್ಲಂಘನೆ ಮಾಡಿರುವ ಶಾಸಕರ ಡಿಸ್ಕ್ವಾಲಿಫೈ ಮಾಡಲು ಪತ್ರ ನೀಡಿದ್ದೇನೆ. ಈ ಬಗ್ಗೆ ಸ್ಪೀಕರ್ ತೀರ್ಮಾನ ಕೈಗೊಳ್ಳುತ್ತಾರೆ ಎಂದರು. ಕೆಲವರು ಸರ್ಕಾರ ಕೆಡವಲು ಮುಂದಾಗಿದ್ದರು. ಅದ್ರೆ ಅವರು ಫೇಲ್ ಆಗಿದ್ದಾರೆ. ಫೇಲ್ ಮಾಡಲು ನಾನೇ ಕಾರಣ ಎಂಬ ಕಾರಣಕ್ಕೆ ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದು ಸುಳ್ಳು.
ಡಿ.ಕೆ. ಶಿವಕುಮಾರ್ ಅವರ ಹಸ್ತಕ್ಷೇಪದಿಂದ ಅತೃಪ್ತ ಶಾಸಕರು ಸರ್ಕಾರದ ವಿರುದ್ಧ ನಡೆದಿದ್ದಾರೆ ಎಂಬ ಆರೋಪ ತಪ್ಪು ಎಂದರು. ಶಾಸಕ ಗಣೇಶ್ ನಾಪತ್ತೆಯಾದ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರು ಎಲ್ಲಿದ್ದಾರೆ ಎಂದು ನನಗೆ ಗೊತ್ತಿಲ್ಲ. ಎಂಬಿ ಪಾಟೀಲ್ ಬಿಜೆಪಿ ಸಂಪರ್ಕದಲ್ಲಿದ್ದಾರೆ ಏನ್ನುವ ಬಗ್ಗೆ ಅವರನ್ನೇ ಕೇಳಬೇಕು ಎಂದು ಸಿದ್ದರಾಮಯ್ಯ ಹೇಳಿದರು.