ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕರಡಕಲ್ಲ ಕೆರೆಯಲ್ಲಿ ಕೃಷ್ಣಾ ಪ್ರವಾಹ ಎದುರಿಸಲು ಅಗ್ನಿಶಾಮಕ ಸಿಬ್ಬಂದಿ ಪೂರ್ವಭಾವಿ ಸಿದ್ಧತೆ ಮತ್ತು ತರಬೇತಿ ನಡೆಸಿದರು.
ಗುರುವಾರ ಕರಡಕಲ್ಲ ಕೆರೆಗೆ ಬೋಟ್ ಸಿದ್ಧಪಡಿಸಿ, ಯಂತ್ರ ಜೋಡಣೆ ಮಾಡಿ ನೀರಲ್ಲಿ ಇಳಿಸಲಾಯಿತು. ರಕ್ಷಾ ಕವಚಗಳು, ಹುಟ್ಟು ಇತರೆ ರಕ್ಷಣಾ ಸಾಮಗ್ರಿಗಳ ಬಳಕೆ ಹಾಗೂ ವಾಯು ಭಾರ ಹೆಚ್ಚಿದಾಗ ಕೈಗೊಳ್ಳುವ ಮುನ್ನೆಚ್ಚರಿಕೆ ಕ್ರಮಗಳ ತಾಲೀಮು ನಡೆಸಲಾಯಿತು.
ನಾರಾಯಣಪುರ ಅಣೆಕಟ್ಟೆಯಿಂದ ಕೃಷ್ಣಾ ನದಿಗೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಸುವ ಸಾಧ್ಯತೆಗಳಿವೆ. ಗುರುವಾರ ಮಧ್ಯಾಹ್ನದ ವೇಳೆಗೆ 40 ಸಾವಿರ ಕ್ಯೂಸೆಕ್ ನೀರು ಹರಿಬಿಟ್ಟಿದ್ದರಿಂದ ಪೂರ್ವ ಸಿದ್ಧತೆಗೆ ಕ್ರಮ ಕೈಗೊಂಡಿದೆ. ಅಗ್ನಿ ಶಾಮಕ ಜಿಲ್ಲಾ ಅಧಿಕಾರಿ ರವೀಂದ್ರ ಘಾಟ್ಗೆ, ತಹಶೀಲ್ದಾರ ಚಾಮರಾಜ ಪಾಟೀಲ, ಡಿವೈಎಸ್ಪಿ ಎಸ್.ಎಸ್.ಹುಲ್ಲೂರು ತರಬೇತಿ ಮತ್ತು ಪೂರ್ವ ಸಿದ್ಧತೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.