ರಾಯಚೂರು : ಪಂಪ್ ಸೆಟ್ ಕಳ್ಳತನ ಮಾಡಿದ ಸರ್ಕಾರಿ ನೌಕರನಿಗೆ ಮಹಿಳೆ ಚಪ್ಪಲಿ ಏಟು ನೀಡಿರುವ ಘಟನೆ ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಬಸ್ ಡಿಪೋ ಬಳಿ ನಡೆದಿದೆ. ಮಹಿಳೆಯು ಮಾರುಕಟ್ಟೆಯಲ್ಲಿ 2500 ರೂಪಾಯಿ ಮೌಲ್ಯದ ಪಂಪ್ ಸೆಟ್ ಖರೀದಿಸಿ ಸಾರಿಗೆ ಬಸ್ ನಲ್ಲಿ ತಮ್ಮ ಊರಿಗೆ ತೆರಳುತ್ತಿದ್ದರು. ಅದೇ ಬಸ್ ನಲ್ಲಿ ಈ ಸರ್ಕಾರಿ ನೌಕರನೂ ಪ್ರಯಾಣಿಸುತ್ತಿದ್ದ. ಕುಡಿದ ಮತ್ತಿನಲ್ಲಿ ನೌಕರನು ಮಹಿಳೆಯ ಚೀಲದಿಂದ ಪಂಪ್‌ಸೆಟ್ ಎಗರಿಸಿದ್ದಾನೆ ಎನ್ನಲಾಗ್ತಿದೆ.
ಆದರೆ ಬಸ್‌ನಲ್ಲಿ ಈ ಬಗ್ಗೆ ಮಹಿಳೆಗೆ ಗೊತ್ತಾಗಿಲ್ಲ. ಮಹಿಳೆಗೆ ತಾನು ಇಳಿಯುವ ಸ್ಥಳ ಬಂದಾಗ ಚೀಲದಲ್ಲಿದ್ದ ಪಂಪ್ ಸೆಟ್ ಕಳ್ಳತನವಾಗಿರುವುದು ಗೊತ್ತಾಗಿದೆ. ತಕ್ಷಣ ಆಕೆ ಆಟೋವನ್ನು ಹಿಡಿದು ಬಸ್ ನ್ನು ಹಿಂಬಾಲಿಸಿ ಪರಿಶೀಲಿಸಿದಾಗ, ಪಂಪ್ ಸೆಟ್ ಕಳ್ಳತನ ಮಾಡಿದ್ದು ಗೊತ್ತಾಗಿದೆ. ಇದರಿಂದ ಆಕ್ರೋಶಗೊಂಡ ಮಹಿಳೆ ಚಪ್ಪಲಿಯಿಂದ ಸರ್ಕಾರಿ ನೌಕರನಿಗೆ ಹೊಡೆದಿದ್ದಾಳೆ. ಬಳಿಕ ಸಹ ಪ್ರಯಾಣಿಕರು ಆತನಿಗೆ ಛೀಮಾರಿ ಹಾಕಿ ಬಿಟ್ಟು ಕಳುಹಿಸಿದ್ದಾರೆ.
ಓದಿ :ಚಿಕ್ಕಮಗಳೂರಲ್ಲಿ ಬೃಹತ್ ಆನೆ ದಂತ ಮಾರಾಟ ಯತ್ನ : ಸಿಕ್ಕಿಬಿದ್ದ ಖದೀಮರು