ರಾಯಚೂರು: ಸಂತೆ ಮಾಡಲು ಬಂದ ಮಹಿಳೆ ಲಾರಿ ಗಾಲಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾಯಚೂರಿನ ಶಕ್ತಿನಗರದಲ್ಲಿ ನಡೆದಿದೆ.
ಶಕ್ತಿನಗರದ 1ನೇ ಕ್ರಾಸ್ ಬಳಿ ಈ ದುರ್ಘಟನೆ ನಡೆದಿದ್ದು, ಕಡ್ಲೂರು ಗ್ರಾಮದ ಸುಧಾ(25) ಮೃತ ಮಹಿಳೆಯೆಂದು ತಿಳಿದು ಬಂದಿದೆ. ಶಕ್ತಿನಗರದ ಹೈವೇ ಬಳಿ ಸಂತೆ ಮಾಡಲು ಬಂದಿದ್ದ ಸುಧಾ ಲಾರಿ ಗಾಲಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹವನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಶಕ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಈ ರಸ್ತೆ ರಾಯಚೂರಿನಿಂದ ಹೈದರಾಬಾದ್ಗೆ ತೆರಳುವ ರಾಷ್ಟ್ರೀಯ ಹೆದ್ದಾರಿಯಾಗಿದ್ದು, ನಿತ್ಯ ನೂರಾರು ವಾಹನಗಳು ಸಂಚಾರಿಸುತ್ತವೆ. ಇಂತಹ ವಾಹನ ದಟ್ಟಣೆ ಇರುವ ರಸ್ತೆಯ ಪಕ್ಕದಲ್ಲಿಯೇ ಸಂತೆ ನಡೆಯುತ್ತಿದ್ದು, ಇದು ಇಂತಹ ದುರ್ಘಟನೆಗೆ ಕಾರಣವೆಂದು ಸ್ಥಳೀಯರು ಆರೋಪಿಸಿದ್ದಾರೆ.