ಲಿಂಗಸುಗೂರು: ದ್ವಿಚಕ್ರ ವಾಹನದ ಹಿಂದಿನ ಚಕ್ರಕ್ಕೆ ಸೀರೆ ಸೆರಗು ಸಿಕ್ಕಿಹಾಕಿಕೊಂಡು ನೆಲಕ್ಕೆ ಬಿದ್ದ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ಲಿಂಗಸುಗೂರು ತಾಲೂಕು ಆಮದಿಹಾಳ ಬಳಿ ನಡೆದಿದೆ.
ಮೃತಳನ್ನು ಉಪ್ಪಾರನಂದಿಹಾಳ ಗ್ರಾಮದ ಬಸಮ್ಮ (55) ಅಮರಪ್ಪ ಕವಿತಾಳ ಎಂದು ಗುರುತಿಸಲಾಗಿದೆ. ಪಡಿತರಕ್ಕೆಂದು ಬಂದಿದ್ದ ಮಹಿಳೆ ಗ್ರಾಮಕ್ಕೆ ಪರಿಚಯಸ್ಥರ ಬೈಕ್‌ನಲ್ಲಿ ಕುಳಿತು ವಾಪಸ್ಸಾಗುವಾಗ ದುರ್ಘಟನೆ ಜರುಗಿದೆ.
ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಶಿವಪ್ಪ ನಾಯಕ ಎಂಬುವವರ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂದು ಮೃತಳ ಮಗ ಆದಪ್ಪ ಕವಿತಾಳ ಮುದಗಲ್ಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಘಟನಾ ಸ್ಥಳಕ್ಕೆ ಸಿಪಿಐ ದೀಪಕ್ ಭೂಸರೆಡ್ಡಿ, ಪಿಎಸ್ಐ ಕಾಡೇಶ ಭೇಟಿ ನೀಡಿ ಪರಿಶೀಲನೆ ನಡೆಸಿದರು.