ರಾಯಚೂರು: ಚರಂಡಿ ವಿಚಾರಕ್ಕೆ ಯೋಧ ಹಾಗೂ ಗ್ರಾಮದ ಮುಖಂಡರ ನಡುವೆ ಗಲಾಟೆ ಸಂಭವಿಸಿ, ಯೋಧನ ತಾಯಿ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ನಿಲೋಗಲ್ ಗ್ರಾಮದಲ್ಲಿ ನಡೆದಿದೆ.
ಯೋಧ ಅಮರೇಶ ಹಾಗೂ ಗ್ರಾಮದ ಮುಖಂಡ ಶರಣಪ್ಪಗೌಡ ಅವರ ನಡುವೆ ಗಲಾಟೆಯಾಗಿದೆ. ಶರಣಪ್ಪಗೌಡ ಅವರ ಗುಂಪಿನಿಂದ ಅಮರೇಶ ಅವರ ತಾಯಿ ವೀರಮ್ಮ ಲಿಂಗಪ್ಪ(75) ಎನ್ನುವವರ ಮೇಲೆ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮನೆ ಮುಂದಿನ ಚರಂಡಿ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಶರಣಪ್ಪಗೌಡ ಹಾಗೂ ಅಮರೇಶ ನಡುವೆ ಮಾತಿಗೆ ಮಾತು ಬೆಳೆದು ನಂತರ ವಿಕೋಪಕ್ಕೆ ತಿರುಗಿದೆ. ಈ ವೇಳೆ ನೂಕಾಟ, ತಳ್ಳಾಟವೂ ಆಗಿದೆ. ಜೊತೆಗೆ ಸೈನಿಕ ಮೇಲೆಯೂ ಹಲ್ಲೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಯೋಧನ ತಾಯಿ ಮೃತಪಟ್ಟಿದ್ದು, ಕೊಲೆ ಮಾಡಲಾಗಿದೆ ಎಂದು ದೂರಲಾಗಿದೆ.
ಇದನ್ನೂ ಓದಿ: 'ಹಿಜಾಬ್ ವಿವಾದವನ್ನು ವಿದ್ಯಾರ್ಥಿನಿಯರ ಮೂಲಕ ಆಡಿಸುತ್ತಿರುವ ಕೀಲಿಕೈ ಬೇರೆಯೇ ಇದೆ'
ವಿಷಯ ತಿಳಿದು ಸ್ಥಳಕ್ಕೆ ಹಟ್ಟಿ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ನಿಭಾಯಿಸಿದ್ದಾರೆ. ಸದ್ಯ ನಿಲೋಗಲ್ ಗ್ರಾಮದಲ್ಲಿ ಬಿಗುವಿನ ವಾತಾವರಣವಿದೆ. ಶರಣಪ್ಪಗೌಡ ಬಿಜೆಪಿ ಮುಖಂಡನಾಗಿದ್ದಾನೆ. ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.