ETV Bharat / state

ಒಮ್ನಿ ವಾಹನಕ್ಕೆ ಪ್ರೆಸ್​ ಎಂದು ಬರೆಸಿಕೊಂಡು ಕರ್ಫ್ಯೂನಲ್ಲಿ ತರಕಾರಿ ವ್ಯಾಪಾರ: ಪೊಲೀಸರಿಂದ ತರಾಟೆ - vegetable trader writes press in his omni car

ಒಮ್ನಿ ವಾಹನಕ್ಕೆ ಪ್ರೆಸ್​ ಎಂದು ಬರೆಸಿಕೊಂಡು ಕರ್ಫ್ಯೂ ವೇಳೆ ತರಕಾರಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗೆ ಪೊಲೀಸರು ದಂಡ ವಿಧಿಸಿ ಮಾಧ್ಯಮದ ಹೆಸರು ದುರ್ಬಳಕೆ ಮಾಡಿಕೊಳ್ಳದಂತೆ ಎಚ್ಚರಿಕೆ ನೀಡಿ ಕಳಿಸಿದ್ದಾರೆ.

press
author img

By

Published : Apr 28, 2021, 9:02 PM IST

Updated : Apr 28, 2021, 9:09 PM IST

ಹಾವೇರಿ: ಕೊರೊನಾ ಕರ್ಫ್ಯೂ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಜನರು ಎಂತೆಂಥ ಉಪಾಯ ಮಾಡುತ್ತಾರೆ ನೋಡಿ. ಹಾವೇರಿಯಲ್ಲೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳಲು ಮಾಧ್ಯಮದ ಮೊರೆ ಹೋಗಿದ್ದಾನೆ.

ಪೊಲೀಸರಿಂದ ತರಕಾರಿ ವ್ಯಾಪಾರಿಗೆ ತರಾಟೆ

ತರಕಾರಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿ ಹಾವೇರಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.10 ಗಂಟೆಯಾಗುತ್ತಿದ್ದಂತೆ ಹಾವೇರಿ ಪೊಲೀಸರು ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದರು. ಈ ಸಂದರ್ಭದಲ್ಲಿ ಓಮ್ನಿಯಲ್ಲಿ ತರಕಾರಿ ಮಾರುವ ವ್ಯಕ್ತಿ ತನ್ನ ವಾಹನಕ್ಕ ಪ್ರೆಸ್ ಎಂದು ಬರೆಸಿದ್ದ. ಪೊಲೀಸರು ಓಮ್ನಿ ಹಿಡಿದು ಪರೀಕ್ಷಿಸಿದಾಗ ಆತ ಮಾಧ್ಯಮದಲ್ಲಿ ಕೆಲಸ ಮಾಡುವ ವ್ಯಕ್ತಿ ಅಲ್ಲ, ತರಕಾರಿ ಮಾರುವವ ಎನ್ನುವುದು ತಿಳಿಯಿತು. ಈ ಕುರಿತಂತೆ ಪೊಲೀಸರು ತನಿಖೆ ಆರಂಭಿಸಿದಾಗ ವಾಹನಕ್ಕೆ ಪ್ರೆಸ್‌ಗೂ ಮತ್ತು ವ್ಯಕ್ತಿಗೂ ಯಾವುದೇ ಸಂಬಂಧವಿಲ್ಲ ಎಂಬುದು ಗೊತ್ತಾಗಿದೆ. ಇದರಿಂದ ಗರಂ ಆದ ಪೊಲೀಸರು ಮಾಧ್ಯಮದ ಹೆಸರು ದುರ್ಬಳಕೆ ಮಾಡಿಕೊಂಡ ವ್ಯಕ್ತಿಗೆ ದಂಡ ಹಾಕಿದ್ದಾರೆ.

ಇನ್ನೊಮ್ಮೆ ಈ ರೀತಿ ಮಾಡಿದರೆ ಲೈಸೆನ್ಸ್ ರದ್ದು ಮಾಡುವದಾಗಿ ವಾರ್ನಿಂಗ್​ ಕೊಟ್ಟಿದ್ದಾರೆ. ಅಲ್ಲದೆ ವಾಹನ ಸೀಜ್ ಮಾಡುವುದಾಗಿ ತಿಳಿಸಿದ್ದಾರೆ. ವಾಹನಕ್ಕೆ ಅಂಟಿಸಲಾಗಿದ್ದ ಪ್ರೆಸ್ ಸ್ಟಿಕ್ಕರ್​ ಕಿತ್ತು ಹಾಕಿಸಿ ನಂತರ ಪೊಲೀಸರು ವಾಹನ ಬಿಟ್ಟಿದ್ದಾರೆ.

Last Updated : Apr 28, 2021, 9:09 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.