ರಾಯಚೂರು: ನನ್ನ ಮೂರ್ತಿ ಅನಾವರಣ ಮಾಡುವುದಕ್ಕೆ ಹೊರಟಿದ್ದ ಅಭಿಮಾನಿಗಳಿ ನಾನು ಸದಾ ಚಿರಋಣಿಯಾಗಿದ್ದೇನೆ. ನನ್ನ ಮೂರ್ತಿ ಅನಾವರಣಕ್ಕೆ ನಾನು ಹೇಗೆ ಒಪ್ಪಿಕೊಳ್ಳಲಿ. ಅದಕ್ಕೆ ಬೇಡ ಎಂದು ಹೇಳಿದೆ. ನಾನು ಅಷ್ಟು ದೊಡ್ಡವನಲ್ಲ ಎಂದು ನಟ ಸುದೀಪ್ ಇದೇ ವೇಳೆ ಹೇಳಿದರು.
ಜಿಲ್ಲೆಯ ಸಿರವಾರ ತಾಲೂಕಿನ ಕುರಕುಂದಾ ಗ್ರಾಮದಲ್ಲಿ ವಾಲ್ಮೀಕಿ ಹಾಗೂ ವೀರಮದಕರಿ ನಾಯಕ ಮೂರ್ತಿ ಅನಾವರಣಗೊಳಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೂರ್ತಿ ಅನಾವರಣಕ್ಕೆ ನಾನು ಹೇಗೆ ಒಪ್ಪಿಕೊಳ್ಳಲಿ. ಅದಕ್ಕೆ ಬೇಡ ಅಂದೆ. ಬಹಳ ಜನ ಸಾಧನೆ ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿ ಅನೇಕ ಸಾಧಕರು ಇದ್ದಾರೆ ಎಂದರು.
ಸಾಧಕರಿಗೆ ಗೌರವ ಸಲ್ಲಬೇಕು. ನಾನು ಅಷ್ಟು ದೊಡ್ಡವನಲ್ಲ. ನಾನು ಸಾಧನೆ ಮಾಡಬೇಕಾದದ್ದು ಇನ್ನೂ ತುಂಬಾ ಇದೆ. ಮುಂದೆ ಅಂತಹ ದಿನ ಬಂದಾಗ ನನ್ನ ಮೂರ್ತಿ ಇಡಲಿ. ನಾನೇ ಬರ್ತಿನಿ. ನನ್ನ ಮೂರ್ತಿ ನಿರ್ಮಾಣವಾದ ಮೇಲೆ ನನಗೆ ವಿಚಾರ ಗೊತ್ತಾಗಿದ್ದು. ಇಲ್ಲ ಎಂದರೆ ನಾನು ಮೊದಲೇ ಬೇಡ ಅಂತಿದ್ದೆ ಎಂದರು.
ಓದಿ: ಸುದೀಪ್ ಕಾರ್ಯಕ್ರಮದಲ್ಲಿ ಲೇಡಿ ಪಿಎಸ್ಐ ಜೊತೆ ಅನುಚಿತ ವರ್ತನೆ.. ಕಪಾಳ ಮೋಕ್ಷ ಮಾಡಿದ ಅಧಿಕಾರಿ!
ಎಸ್ಟಿಗೆ ಶೇ7.5 ಮೀಸಲಾತಿಗಾಗಿ ವಾಲ್ಮೀಕಿ ಸಮಾಜ ಶ್ರೀಗಳ ಹೋರಾಟಕ್ಕೆ ನನ್ನ ಬೆಂಬಲವಿದೆ. ನಾನು ಹೋರಾಟದಲ್ಲಿ ನೇರವಾಗಿ ಭಾಗವಹಿಸಬೇಕು ಅಂತೇನಿಲ್ಲಾ. ಪ್ರಸನ್ನಾನಂದಪುರಿ ಸ್ವಾಮೀಜಿ ಇದರ ಬಗ್ಗೆ ಮಾತನಾಡಿಲ್ಲ. ಅವರು ಮಾತನಾಡಲಿ. ಅವರ ಸಂಪರ್ಕದಲ್ಲಿದ್ದೇನೆ ಎಂದರು. ಸಿನಿಮಾದಿಂದ ನಾನು ಇಷ್ಟೊಂದು ಸಂಪಾದನೆ ಮಾಡಿರುವುದು. ಅದರ ಬಗ್ಗೆ ಕಾಳಜಿಗಳು, ಜವಾಬ್ದಾರಿ ಇವೆ. ಇವತ್ತು ಏನೇ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದರೂ ಅದು ಸಿನಿಮಾದಿಂದ ಬಂದ ದುಡ್ಡಲ್ಲಿ ಮಾಡುತ್ತಿದ್ದೇನೆ ಎಂದರು.
ಅಪ್ಪು ಬಗ್ಗೆ ನಾವು ಏನೇ ಮಾತನಾಡಿದರೂ ಅದು ಒಳ್ಳೆಯ ರೀತಿಯಲ್ಲೇ ಇರಬೇಕು. ಅವರು ಸಾಕಷ್ಟು ಒಳ್ಳೆಯ ಕೆಲಸಗಳನ್ನ ಮಾಡಿದ್ದಾರೆ ಎಂದ ಅವರು, ನಮ್ಮ ತಂದೆ ತಾಯಿ ಹಾಕಿಕೊಟ್ಟಿರುವ ಮಾರ್ಗದಲ್ಲಿ ನಾವು ನಡೆಯುತ್ತಿದ್ದೇವೆ. ಮನಸ್ಸಿಗೆ ಬಂದಿದ್ದನ್ನ ಮನಸ್ಪೂರ್ವಕವಾಗಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.