ರಾಯಚೂರು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರಾಜ್ಯಸಭಾ ಸದಸ್ಯ ದಿ.ಅಶೋಕ ಗಸ್ತಿ ಅವರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸ್ವಾಂತನ ಹೇಳಿ ಧೈರ್ಯ ತುಂಬಿದರು.
ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಸ್ತಿ ಅವರು ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿದ್ದಾರೆ. ಆದರೆ ವಿಧಿಯಾಟದಿಂದ ಅವರ ಆಗಲಿಕೆ ತುಂಬಾ ನೋವು ತಂದಿದೆ. ಗಸ್ತಿಯವರ ಕುಟುಂಬದ ಜತೆಗೆ ನಮ್ಮ ಪಕ್ಷ ಇದೆ ಎಂದರು.
ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಕುಮಾರ್ ಮನೆಯ ಮೇಲೆ ಸಿಬಿಐ ದಾಳಿ ಕುರಿತು ಪ್ರತಿಕ್ರಿಯಿಸಿದ ಅವರು, ಡಿಕೆಶಿ ಅವರು ರಾಜಕೀಯ ಬರುವ ಮುನ್ನ ಹೇಗೆದ್ದರು ಈಗ ಹೇಗಿದ್ದಾರೆ ಎಂಬುದು ಎಲ್ಲಾರಿಗೂ ಗೊತ್ತಿದೆ. ಸಿಬಿಐ ಮತ್ತು ಐಟಿ ಇಲಾಖೆ ದಾಳಿ ನಡೆಸಿದಾಗ ರಾಜಕೀಯ ಪ್ರೇರಿತ ಎನ್ನುವುದು ಸಾಮಾನ್ಯ. ಆದರೆ ಸಿಬಿಐ, ಐಟಿ ಇಲಾಖೆ ದಾಳಿಗೂ ಮುನ್ನ ವರ್ಷಗಳ ಕಾಲ ತಯಾರಿ ನಡೆಸಿ ಮಾಹಿತಿಯೊಂದಿಗೆ ದಾಳಿ ನಡೆಸಲಾಗುತ್ತದೆ ಎಂದರು.