ರಾಯಚೂರು: ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಹೇಮನೂರು ಗ್ರಾಮದಲ್ಲಿ ನಡೆದಿದೆ.
ಟಂಟಂ ಚಾಲಕ ರಂಗಯ್ಯ (29), ಆತನ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿವಾಹಿತನಾಗಿರುವ ರಂಗಯ್ಯನಿಗೆ ಕಳೆದ 6 ವರ್ಷಗಳ ಹಿಂದೆ ಮದುವೆಯಾಗಿದ್ದು, ಪತ್ನಿಯನ್ನ ಕೊತ್ತದೊಡ್ಡಿ ಗ್ರಾಮದ ಜಾತ್ರೆಗೆ ಕಳುಹಿಸಿದ್ದಾನೆ.
ಓದಿ:ಬಾರ್ ಹೊರಗೆ ನಿಂತಿದ್ದ ಗೆಳೆಯರಿಬ್ಬರಿಗೆ ಚಾಕು ಇರಿತ: ಓರ್ವ ಸಾವು
ಬಳಿಕ ರಂಗಯ್ಯ ಪ್ರೇಯಸಿಯನ್ನ ಮನೆಗೆ ಕರೆಸಿಕೊಂಡು ಅಲ್ಲೇ ಇಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಚಾರ ಪತ್ನಿ ಮನೆಗೆ ಬಂದ ಬಳಿಕ ತಿಳಿದಿದೆ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ದೇವದುರ್ಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಾವಿಗೆ ಕಾರಣ ತಿಳಿದು ಬಂದಿಲ್ಲ.