ಲಿಂಗಸುಗೂರು (ರಾಯಚೂರು): ಮೊಹರಂ ಹಬ್ಬದ 9ನೇ ದಿನದ ಕತಾಲ್ ರಾತ್ರಿ ಅಲಾಯಿ (ಪೀರ್) ದೇವರ ಭೇಟಿ ವೇಳೆ ವಿದ್ಯುತ್ ಅವಘಡ ಸಂಭವಿಸಿ, ಇಬ್ಬರು ಮೃತಪಟ್ಟ ದುರ್ಘಟನೆ ನಡೆದಿದೆ. ಲಿಂಗಸುಗೂರು ತಾಲೂಕಿನ ಸಂತೆಕೆಲ್ಲೂರು ಗ್ರಾಮದಲ್ಲಿ ಗುರುವಾರ ರಾತ್ರಿ ವಿದ್ಯುತ್ ತಂತಿ ತಗುಲಿ ಅವಘಡ ಸಂಭವಿಸಿದೆ.
ಅಲಾಯಿ ದೇವರನ್ನು ಹೊತ್ತಿದ್ದ ಹಸನಸಾಬ (60) ಹಾಗೂ ಸಾಂಪ್ರದಾಯಿಕ ಸೇವೆ ಸಲ್ಲಿಸಲು ಬಂದಿದ್ದ ಹುಲಿಗೆಮ್ಮ (25) ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೇ ಮೃತಪಟ್ಟರು. ಇತರೆ ನಾಲ್ಕು ಜನರಿಗೆ ಗಾಯಗಳಾಗಿದ್ದು, ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಎಸ್.ಎಸ್ ಹುಲ್ಲೂರು, ಸಿಪಿಐ ದೀಪಕ್ ಭೂಸರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಮೊಹರಂ ಆಚರಣೆ ವೇಳೆ ಅಗ್ನಿಕುಂಡಕ್ಕೆ ಬಿದ್ದ ವ್ಯಕ್ತಿ.. ಮುಂದೇನಾಯ್ತು?