ರಾಯಚೂರು: ಕಲ್ಲು ಕ್ವಾರಿಯಲ್ಲಿ ನಿಂತಿದ್ದ ನೀರಿನಲ್ಲಿ ಈಜಲು ಹೋಗಿದ್ದ ಬಾಲಕರಿಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ದೇವದುರ್ಗ ತಾಲೂಕಿನ ಮಲ್ಲೇದವರಗುಡ್ಡ ಗ್ರಾಮದ ಬಳಿ ಬರುವ ಪೂಜಾರಿ ಸೀತಮ್ಮತಾಂಡದಲ್ಲಿ ಈ ಘಟನೆ ಜರುಗಿದೆ. ಸಂತೋಷ ರಾಠೋಡ್(15), ಮಂಜುನಾಥ ರಾಠೋಡ(13) ಮೃತ ಬಾಲಕರು. ತಾಂಡದಲ್ಲಿ ಕಲ್ಲಿನ ಕ್ವಾರಿಯಗಳಲ್ಲಿ ನೀರು ಸಂಗ್ರಹವಾಗಿದ್ದು, ಈ ನೀರನಲ್ಲಿ ಈಜಲು ಬಾಲಕರು ತೆರಳಿದ್ದರು. ಈ ವೇಳೆ ನೀರಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.
ಓದಿ: ವಿಜಯಪುರದಲ್ಲಿ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಗಾನ ಬಜಾನ!
ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಗ್ರಾಮಸ್ಥರ ಸಹಾಯದಿಂದ ಬಾಲಕರ ಮೃತದೇಹಗಳನ್ನು ಮೇಲಕ್ಕೆ ತಂದಿದ್ದಾರೆ. ಈ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.