ETV Bharat / state

ಇಬ್ಬರು ಬೈಕ್​ ಕಳ್ಳರ ಬಂಧನ: 5 ಲಕ್ಷ ರೂ. ಮೌಲ್ಯದ 17 ಬೈಕ್​ಗಳು ವಶಕ್ಕೆ

ರಿಮ್ಸ್ ಆಸ್ಪತ್ರೆ ಆವರಣದ ಬೈಕ್​ ಸ್ಟ್ಯಾಂಡ್​ನಲ್ಲಿದ್ದ ಬೈಕ್​ಗಳನ್ನೇ ಟಾರ್ಗೆಟ್​ ಮಾಡಿ ಕದಿಯುತ್ತಿದ್ದ ಇಬ್ಬರು ಖದೀಮರನ್ನು ಬಂಧಿಸಲಾಗಿದ್ದು, ಆರೋಪಿಗಳಿಂದ 5 ಲಕ್ಷದ 2 ಸಾವಿರ ಮೌಲ್ಯದ 17 ಬೈಕ್​ಗಳನ್ನ ವಶಕ್ಕೆ ಪಡೆಯಲಾಗಿದೆ.

two bike thieves Arrested In Raichur
ಇಬ್ಬರು ಬೈಕ್​ ಕಳ್ಳರ ಬಂಧನ: 5 ಲಕ್ಷದ 2 ಸಾವಿರ ಮೌಲ್ಯದ 17 ಬೈಕ್​ಗಳು ವಶಕ್ಕೆ
author img

By

Published : Sep 24, 2020, 6:06 PM IST

ರಾಯಚೂರು: ರಿಮ್ಸ್ ಆಸ್ಪತ್ರೆ ಆವರಣದ ಬೈಕ್​ ಸ್ಟ್ಯಾಂಡ್​ನಲ್ಲಿದ್ದ ಬೈಕ್​ಗಳನ್ನೇ ಟಾರ್ಗೆಟ್​ ಮಾಡಿ ಕದಿಯುತ್ತಿದ್ದ ಇಬ್ಬರು ಖದೀಮರನ್ನು ಬಂಧಿಸಲಾಗಿದೆ ಎಂದು ಎಸ್​ಪಿ ನಿಕ್ಕಂ ಪ್ರಕಾಶ್​ ತಿಳಿಸಿದ್ದಾರೆ.

ಇಬ್ಬರು ಬೈಕ್​ ಕಳ್ಳರ ಬಂಧನ: 5 ಲಕ್ಷದ 2 ಸಾವಿರ ಮೌಲ್ಯದ 17 ಬೈಕ್​ಗಳು ವಶಕ್ಕೆ

ತಮ್ಮ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಮಾರ್ಕೆಟ್ ಯಾರ್ಡ್, ಸದರ್ ಬಜಾರ್, ರಾಯಚೂರು ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚು ಬೈಕ್​ ಕಳ್ಳತನ ಪ್ರಕರಣಗಳು ಕಂಡುಬರುತ್ತಿದ್ದವು. ಹೀಗಾಗಿ ವಿಶೇಷ ತಂಡ ರಚನೆ ಮಾಡಲಾಗಿತ್ತು. ಇದೀಗ ಆ ತಂಡ ಆರೋಪಿಗಳನ್ನು ಸೆರೆ ಹಿಡಿದು ವಿಚಾರಣೆ ಮಾಡಿದ್ದು, ಬೈಕ್​ಗಳ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಆರ್​ಟಿಪಿಎದ್​ನಲ್ಲಿ ದಿನಗೂಲಿ ಮಾಡುತ್ತಿದ್ದ ಮಾರ್ಚೆಡ್ ಗ್ರಾಮದ ರಾಮು ಜಂಬಯ್ಯ ಹಾಗೂ ಬುಲ್ಡೋಜರ್ ಅಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಹೆಗ್ಗಸನಹಳ್ಳಿ ಗ್ರಾಮದ ಬಸವರಾಜ ಲಕ್ಷ್ಮಣ ಬಂಧಿತ ಬೈಕ್ ಕಳ್ಳರಾಗಿದ್ದಾರೆ. ಇನ್ನು ಆರೋಪಿಗಳಿಂದ 5 ಲಕ್ಷದ 2 ಸಾವಿರ ಮೌಲ್ಯದ 17 ಬೈಕ್​ಗಳನ್ನ ವಶಕ್ಕೆ ಪಡೆಯಲಾಗಿದೆ. ಬಂಧಿತರು ನಕಲಿ ಕೀ ಬಳಸಿ ಕಳ್ಳತನ ಮಾಡುತ್ತಿದ್ದು, ಈ ಕುರಿತು ಹೆಚ್ಚಿನ ತನಿಖೆ ಮಾಡಲಾಗುತ್ತಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.