ರಾಯಚೂರು: ಜಿಲ್ಲೆಯಲ್ಲಿ ಸಾರ್ವಜನಿಕರು ಸಮರ್ಪಕವಾಗಿ ಸಂಚಾರ ನಿಯಮ ಪಾಲನೆ ಮಾಡದೇ ಇರುವುದರಿಂದ ಪೊಲೀಸ್ ಇಲಾಖೆ 37 ದಿನಗಳಲ್ಲಿ 13,005 ಪ್ರಕರಣ ದಾಖಲಿಸಿ, 19,85,950 ರೂ. ದಂಡ ವಸೂಲಿ ಮಾಡಿದೆ.
ರಾಯಚೂರಿನಲ್ಲಿ ಪೊಲೀಸ್ ಇಲಾಖೆ, ಸಾರ್ವಜನಿಕರು ಸಮರ್ಪಕವಾಗಿ ಸಂಚಾರ ನಿಯಮ ಪಾಲನೆ ಮಾಡದೇ ಇರುವುದರಿಂದ 37 ದಿನಗಳಲ್ಲಿ 13,005 ಪ್ರಕರಣ ದಾಖಲಿಸಿ, 19,85,950 ರೂ. ದಂಡ ವಸೂಲಿ ಮಾಡಿದೆ. ಕಳೆದ ತಿಂಗಳು 10ರಂದು ನೂತನ ಎಸ್ಪಿಯಾಗಿ ಡಾ.ಸಿ.ಬಿ.ವೇದಮೂರ್ತಿ ಅಧಿಕಾರ ಸ್ವೀಕಾರ ಮಾಡಿದ್ರು. ಅಧಿಕಾರ ಸ್ವೀಕರಿಸಿದ ಬಳಿಕ ಸಾರ್ವಜನಿಕರಿಗೆ ಸಂಚಾರ ನಿಯಮ ಪಾಲಿಸುವಂತೆ ಜಿಲ್ಲಾದ್ಯಂತ ಜಾಗೃತಿ ಕಾರ್ಯಕ್ರಮ ಮೂಡಿಸಲಾಗಿತ್ತು. ಆದರೂ ಹಲವರು ಸಂಚಾರ ನಿಯಮ ಉಲ್ಲಂಘಿಸಿರುವುದು ಕಂಡು, ದಂಡ ವಿಧಿಸಲು ಸೂಚಿಸಲಾಯಿತು.
ಈ ಮೂಲಕ 2019 ಜೂನ್ 10ರಿಂದ ಜುಲೈ 16 ವರೆಗೆ, ತ್ರಿಬಲ್ ರೈಡಿಂಗ್, ಮೊಬೈಲ್ ಮಾತನಾಡುವ ವಾಹನ ಚಾಲನೆ, ಇನ್ಸೂರೆನ್ಸ್ ಇಲ್ಲದೇ ಇರುವುದು, ಹೆಲ್ಮೆಟ್ ಧರಿಸದೇ ಇರುವುದು, ಆಟೋಗಳಲ್ಲಿ ಹೆಚ್ಚಿನ ಜನರನ್ನ ತುಂಬಿಕೊಂಡು ಹೋಗುವುದು, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ಸೇರಿದಂತೆ ಒಟ್ಟು 13,005 ಪ್ರಕರಣ ದಾಖಲು ಮಾಡಿ 19,85,950 ರೂ. ದಂಡ ವಸೂಲಿ ಮಾಡಲಾಗಿದೆ.