ರಾಯಚೂರು: ಜಿಲ್ಲೆಗೆ ಮಹಾಮಾರಿ ಕೊರೊನಾ ಸೋಂಕು ಬೆಂಬಿಡದಂತೆ ಕಾಡುತ್ತಿದೆ. ಇಂದು ಒಂದೇ ದಿನ 18 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 403ಕ್ಕೆ ಏರಿಕೆಯಾಗಿದೆ.
ಇಂದು ದೃಢಪಟ್ಟಿರುವ 18 ಸೋಂಕಿತರಲ್ಲಿ ಮಹಾರಾಷ್ಟ್ರದಿಂದ ಮರಳಿದ ಮೂವರು ಬಾಲಕಿಯರು ಸೇರಿದಂತೆ 10 ಜನ, ತೆಲಂಗಾಣದಿಂದ ಮರಳಿದ ಪಿ-7165, 34 ವರ್ಷದ ವ್ಯಕ್ತಿ, ಪಿ-7166, 38 ವರ್ಷದ ವ್ಯಕ್ತಿ ಹಾಗೂ ತಮಿಳುನಾಡಿನಿಂದ ಬಂದ ಪಿ-7164, 42 ವರ್ಷದ ಪುರುಷನಿಗೆ ಸೋಂಕು ತಗುಲಿದೆ. ಕಂಟೈನ್ಮೆಂಟ್ ಝೋನ್ ಪಿ-7172, 37 ವರ್ಷದ ವ್ಯಕ್ತಿಯ ವರದಿ ಕೂಡಾ ಪಾಸಿಟಿವ್ ಬಂದಿದೆ.
ಸೋಂಕಿತರನ್ನ ಓಪೆಕ್ ಕೋವಿಡ್-19 ವಾರ್ಡ್ಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ಮಾಹಿತಿಯನ್ನ ಸಂಗ್ರಹಿಸಲಾಗುತ್ತಿದೆ.
ಇಂದು 18 ಪ್ರಕರಣ ಸೇರಿದಂತೆ ಇದುವರೆಗೆ 403 ಕೊರೊನಾ ಪ್ರಕರಣಗಳು ಜಿಲ್ಲೆಯಲ್ಲಿ ಕಾಣಿಸಿಕೊಂಡಿವೆ. ಇವರಲ್ಲಿ 91 ಜನರನ್ನ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಉಳಿದಂತೆ 310 ಸಕ್ರಿಯ ಪ್ರಕರಣಗಳು ಬಾಕಿ ಇವೆ.