ರಾಯಚೂರು: ಕೃಷ್ಣಾ ನದಿಯಿಂದ ನೀರು ಯಥೇಚ್ಛವಾಗಿ ಹರಿಯುತ್ತಿರುವ ಕಾರಣ ಜನರ ರಕ್ಷಣೆಗೆ ಸನ್ನದ್ಧರಾಗಿರುವ ಎನ್ಡಿಆರ್ಎಫ್ ತಂಡ ರಾಯಚೂರು ತಾಲೂಕಿನ ಶಕ್ತಿನಗರ ಬಳಿಯ ದೇವಸೂಗೂರಿನಲ್ಲಿ ಬೀಡು ಬಿಟ್ಟಿದೆ.
ದೇವಸೂಗೂರಿನಲ್ಲಿ ಬಂದಿಳಿದ ಎನ್ಡಿಆರ್ಎಫ್ ತಂಡ, ಜಾಕೆಟ್, ಸೇಫ್ಟಿ ಕಿಟ್ ನೊಂದಿಗೆ ಪ್ರವಾಹ ಭೀತಿಯಲ್ಲಿರುವ ಗ್ರಾಮಗಳಿಗೆ ಭೇಟಿ ನೀಡಿ ಜನರ ರಕ್ಷಣೆಗೆ ಮುಂದಾಗಿದೆ. ಕೃಷ್ಣಾ ನದಿಗೆ ಇಂದೂ ಸಹ ನೀರು ಬಿಟ್ಟ ಪರಿಣಾಮ ತಾಲೂಕಿನ ಜನರು ಹಾಗೂ ನದಿ ತೀರದ ಗ್ರಾಮಸ್ಥರ ನೆರವಿಗೆ ಧಾವಿಸುವ ಮೂಲಕ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ.