ETV Bharat / state

ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ: ಬಸವಸಾಗರ ಜಲಾಶಯ ಭರ್ತಿಯಾಗಲು ಇನ್ನೊಂದೇ ಮೀಟರ್ ಬಾಕಿ!

ರಾಯಚೂರು ನಗರದ ಏಕಮಿನರ್​ ರಸ್ತೆಯಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಬಳಿಯ ಮುಖ್ಯ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಬೃಹತ್ ಗಾತ್ರದ ಮರವೊಂದು ಬಿದ್ದಿದ್ದು, ಅದೃಷ್ಟವಶಾತ್​ ಬಾರಿ ಅನಾಹುತ ತಪ್ಪಿದೆ.

ಬಸವಸಾಗರ ಜಲಾಶಯ
ಬಸವಸಾಗರ ಜಲಾಶಯ
author img

By

Published : Jul 7, 2022, 9:01 PM IST

ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ರೋಡಲಬಂಡಾ ಗ್ರಾಮದ ಬಳಿಯಿರುವ ಬಸವಸಾಗರ (ನಾರಾಯಣಪುರ) ಜಲಾಶಯ 492.25 ಮೀಟರ್ ಎತ್ತರವಿದ್ದು, ಈಗಾಗಲೇ ಸುರಿಯುತ್ತಿರುವ ಮಹಾಮಳೆಗೆ 491.02 ಮೀಟರ್ ಭರ್ತಿಯಾಗಿದೆ.

ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ರಾಯಚೂರು ತಾಲೂಕಿನ ನಡುಗಡ್ಡೆ ಗ್ರಾಮಸ್ಥರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಅಲ್ಲದೇ ಜಲಾಶಯ ಭರ್ತಿಯಾದರೆ ಯಾವ ಸಂದರ್ಭದಲ್ಲಿಯಾದ್ರೂ ಜಲಾಶಯದಿಂದ ನೀರು ಹೊರಬಿಡುವ ಸಾಧ್ಯತೆ ಇದೆ. ಹೀಗಾಗಿ, ಈಗಾಗಲೇ ನೆರೆ ಹಾವಳಿ ಸಂತ್ರಸ್ತರ ಸಹಾಯಕ್ಕೆ NDRF ತಂಡ‌ ಸಿದ್ಧತೆ ಮಾಡಿಕೊಂಡಿದೆ.

ಕಾರಿನ ಮೇಲೆ ಬಿದ್ದ ಬೃಹತ್ ಮರ..ತಪ್ಪಿದ ಅನಾಹುತ: ರಾಯಚೂರು ನಗರದ ಏಕಮಿನರ್​ ರಸ್ತೆಯಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಬಳಿಯ ಮುಖ್ಯ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಬೃಹತ್ ಗಾತ್ರದ ಮರವೊಂದು ಬಿದ್ದಿದ್ದು, ಅದೃಷ್ಟವಶಾತ್​ ಬಾರಿ ಅನಾಹುತ ತಪ್ಪಿದೆ.

ಕಾರಿನ ಮೇಲೆ ಬಿದ್ದ ಬೃಹತ್ ಮರ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ನಿವಾಸಿಯಾಗಿರುವ ಅರವಿಂದ್ ತಮ್ಮ ಅಜ್ಜಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತಂದಿದ್ದರು. ಅಜ್ಜಿಯನ್ನ ಆಸ್ಪತ್ರೆಯೊಳಗೆ ಚಿಕಿತ್ಸೆಗೆ ಕಳುಹಿಸಿ ಹೊರಗೆ ಕಾದು ಕುಳಿತಿರುವಾಗ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಕಾರಿನ ಹಿಂಭಾಗಕ್ಕೆ ಮರ ಬಿದ್ದಿದ್ದರಿಂದ ಅವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಸದರ್‌ಬಜಾರ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಓದಿ: ಶಿಕ್ಷಣ ಸಚಿವರ ಹೇಳಿಕೆ ಬೇಜವಾಬ್ದಾರಿಯುತ, ಕ್ರೂರತನದಿಂದ ಕೂಡಿದೆ: ಸಿದ್ದರಾಮಯ್ಯ ಆಕ್ರೋಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.