ರಾಯಚೂರು : ರಾಜ್ಯಸಭಾ ಸದಸ್ಯ ಅಶೋಕಗಸ್ತಿ ನಿಧನವಾಗಿರುವುದು ಸುಳ್ಳು ಸುದ್ದಿ, ಅವರಿಗೆ ಆಸ್ಪತ್ರೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರ ಕುಟುಂಬದವರು ಹೇಳುತ್ತಿದ್ದಾರೆ.
ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಸ್ವಾಮಿ ವಿವೇಕಾನಂದ ಬಡಾವಣೆಲ್ಲಿರುವ ಬಿಜೆಪಿ ಮುಖಂಡರು, ಕುಟುಂಬದ ಅಪ್ತರು ಅಶೋಕ ಗಸ್ತಿ ನಿಧನರಾಗಿರುವುದು ಸುಳ್ಳು ಎಂದು ಹೇಳಿದ್ದಾರೆ. ಗಸ್ತಿಯವರ ಆರೋಗ್ಯದಲ್ಲಿ ಏರುಪೇರು ಆಗಿದೆ. ಇದಕ್ಕಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ನಿಧನರಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣ ಬರುತ್ತಿರುವುದು ಸುಳ್ಳು ಎಂದು ತಿಳಿಸಿದ್ದಾರೆ.
ಅಲ್ಲದೇ ಅಶೋಕ ಗಸ್ತಿ ಸಹೋದರ ಪ್ರಭುಗಸ್ತಿ ಈಟಿವಿ ಭಾರತ್‌ನೊಂದಿಗೆ ದೂರವಾಣಿ ಮೂಲಕ ಮಾತನಾಡಿದಾಗ, ನಮ್ಮ ಅಣ್ಣನವರು ನಿಧನವಾಗಿಲ್ಲ, ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.