ರಾಯಚೂರು: ಪದವಿಪೂರ್ವ ಕಾಲೇಜಿನ ಉಪನ್ಯಾಸಕರ ಕೊರತೆ ನೀಗಿಸುವಂತೆ ನೀರಮಾನ್ವಿಯಲ್ಲಿ ಮುಖ್ಯಮಂತ್ರಿಗೆ ವಿದ್ಯಾರ್ಥಿನಿಯರು ಮನವಿ ಸಲ್ಲಿಸಿದ್ದಾರೆ.
ನಮ್ಮ ಶಾಲೆಯಲ್ಲಿ ಕೇವಲ 7 ಜನ ಮಾತ್ರ ಶಿಕ್ಷಕರಿದ್ದಾರೆ. 7 ಜನರಿಗೂ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಿದೆ. ಹಾಗಾಗಿ ಈ ಭಾಗದ ಎಲ್ಲ ವಿದ್ಯಾರ್ಥಿಗಳೂ ಇದೇ ಕಾಲೇಜಿಗೆ ಬರುತ್ತಾರೆ. ಜೊತೆಗೆ ಬಾಲಕಿಯರಿಗೆ ವಸತಿ ನಿಲಯ ಇಲ್ಲ. ಬಸ್ ಸೌಲಭ್ಯವೂ ಇಲ್ಲ ಎಂದು ವಿದ್ಯಾರ್ಥಿನಿಯರು ಸಿಎಂ ಬಳಿ ಸಮಸ್ಯೆ ತೋಡಿಕೊಂಡರು.
ಸಿಎಂ ಅಭಯ:
ಜಾಗ ಇದ್ದರೆ ಬಾಲಕಿಯರ ವಸತಿ ನಿಲಯಕ್ಕೆ ತಕ್ಷಣವೇ ಅನುದಾನ ಮಂಜೂರು ಮಾಡುತ್ತೇನೆ. ಶಿಕ್ಷಕರ ಸಮಸ್ಯೆಯನ್ನು ಪರಿಹರಿಸಿಕೊಡುತ್ತೇನೆ. ಇಂಗ್ಲಿಷ್ ಮತ್ತು ವಿಜ್ಞಾನ ಶಿಕ್ಷಕರನ್ನು ಆದಷ್ಟು ಬೇಗ ನೇಮಕ ಮಾಡ್ತೀನಿ. ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆ ನೀಗಿಸಲು ಮೊದಲು ಪ್ರಯತ್ನ ಮಾಡುತ್ತೇನೆ ಎಂದು ಸಿಎಂ ಭರವಸೆ ನೀಡಿದರು.