ರಾಯಚೂರು : ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಭೀಕರ ಹತ್ಯ ಪ್ರಕರಣ, ತನಿಖೆ ಚುರುಕುಗೊಳಿಸಿದ ಸಿಐಡಿ ತಂಡದಿಂದ ಇಂದು ಶವ ದೊರತ ಸ್ಥಳವನ್ನ ಪರಿಶೀಲನೆ ನಡೆಸಿ ವೈಜ್ಞಾನಿಕ ವಿಧಿ-ವಿಧಾನಗಳಿಂದ ಮಾಹಿತಿಯನ್ನ ಸಂಗ್ರಹಿಸಿದರು.
ನಗರದ ಹೊರವಲಯದ ಉಸುಕಿನ ಆಂಜನೇಯ ದೇವಾಲಯ ಹಿಂಬದಿ ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿನಿ ಶವ ದೊರತೆ ಸ್ಥಳಕ್ಕೆ ಸಿಐಡಿ ತಂಡ ವೈಜ್ಞಾನಿಕ ವಿಧಿ-ವಿಧಾನಗಳಿಂದ ಮಾಹಿತಿಯನ್ನ ಸಂಗ್ರಹಿಸಿದ್ದಾರೆ. ಒಟ್ಟು ಸಿಐಡಿ ಎಸ್ಪಿ ಶರಣಪ್ಪ ಸೇರಿದಂತೆ 9 ಜನ ತಂಡ ಪ್ರಕರಣವನ್ನ ತನಿಖೆ ನಡೆಸುತ್ತಿದ್ದು, ನಿನ್ನೆ ಡಿವೈಸ್ಪಿ ರವಿಶಂಕರ್, ಸಿಪಿಐ ದಿಲೀಪ್ ಕುಮಾರ ಸೇರಿದಂತೆ ಒಟ್ಟು 8 ಜನರ ತಂಡ ತನಿಖೆ ನಡೆಸಿತ್ತು.
ಇಂದು ಬೆಳಗ್ಗೆ ಬೆಂಗಳೂರಿನಿಂದ ಆಗಮಿಸಿದ ಸಿಐಡಿ ಎಸ್ಪಿ ಶರಣಪ್ಪ ನೇತೃತ್ವದ ತಂಡ, ಇದುವರೆಗೂ ಪೊಲೀಸರು ನಡೆಸಿದ ಪ್ರಕರಣದ ವಿವರದ ಮಾಹಿತಿ ಪಡೆದುಕೊಂಡ ಬಳಿಕ, ಘಟನಾ ಸ್ಥಳಕ್ಕೆ ಭೇಟಿ ಮಹಜರು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣ ಕುರಿತು ಮಾತನಾಡಿದ ಸಿಐಡಿ ಎಸ್ಪಿ, ನಾನಾ ಆಯಾಮಗಳಿಂದ ಪ್ರಕರಣವನ್ನ ಕುಲಂಕುಶವಾಗಿ ತನಿಖೆ ನಡೆಸುತ್ತಿದ್ದೆವೆ. ಮೃತ ವಿದ್ಯಾರ್ಥನಿ ಕುಟುಂಬಸ್ಥರನ್ನು ಭೇಟಿಯಾಗಿ ಮಾಹಿತಿ ಸಂಗ್ರಹಿಸಲಾಗುವುದು. ವಿಶೇಷವಾಗಿ ಬೆಂಗಳೂರಿನಿಂದ ಎಸ್.ಎಫ್.ಎಲ್ ಟೀಂನ್ನು ಕರೆಸಿಕೊಂಡಿದ್ದು, ನಿನ್ನೆಯಿಂದ ಪ್ರಾಥಮಿಕವಾಗಿ ತನಿಖೆ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.